ಮಡಿಕೇರಿಯಲ್ಲಿ ಮಂಗಳವಾರ ನಡೆದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಬಿಜೆಪಿ ಸದಸ್ಯ ಉಮೇಶ್ ಸುಬ್ರಮಣಿ ಅವರ ಮಾತಿಗೆ ಪ್ರತಿಕ್ರಿಯಿಸಿದರು
ಮಡಿಕೇರಿಯಲ್ಲಿ ಮಂಗಳವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯೆ ಅನಿತಾ ಪೂವಯ್ಯ ಮಾತನಾಡಿದರು
‘ಪ್ರಜಾವಾಣಿ’ ಪ‍್ರಕಟಿಸಿದ್ದ ‘ದಸರಾ ನಗರಿ ಸಾಲದು ತಯಾರಿ’ ಎಂಬ ಸರಣಿಯಲ್ಲಿ ಸೆ. 29ರಂದು ‘ದಸರಾ: ಶಾಶ್ವತ ಕಾಮಗಾರಿಗಳ ಕೊರತೆ’ ಎಂಬ ಶೀರ್ಷಿಕೆಯಡಿ ಪ್ರತಿ ವರ್ಷವೂ ವೇದಿಕೆ ನಿರ್ಮಾಣಕ್ಕೆ ₹ 35 ಲಕ್ಷ ವೆಚ್ಚ ಮಾಡಲಾಗುತ್ತಿದ್ದು ಶಾಶ್ವತವಾದ ವೇದಿಕೆ ಇಲ್ಲವೇ ರಂಗಮಂದಿರ ಬೇಕು ಎಂದು ಗಮನ ಸೆಳೆದಿತ್ತು.

ಯಾರು ಏನೆಂದರು? ಇದೊಂದು ಒಳ್ಳೆಯ ಯೋಜನೆ. ನಾವು ಸ್ಥಳ ಪರಿಶೀಲನೆ ನಡೆಸಿ ರಂಗಮಂದಿರ ನಿರ್ಮಾಣ ಸಂಬಂಧ ಸಲಹೆಗಳನ್ನು ನೀಡುತ್ತೇವೆ. ಕೆ.ಎಸ್.ರಮೇಶ್ ಬಿಜೆಪಿ ಸದಸ್ಯ. *** ಒಳ್ಳೆಯ ದಸರೆ ಮಾಡಿದ್ದೀರಿ. ಇದೊಂದು ದೂರದೃಷ್ಟಿಯಾದ ಕೆಲಸ. ಈ ಕೆಲಸ ಬೇಗ ಆಗಲಿ ಉಮೇಶ್ ಸುಬ್ರಮಣಿ ಬಿಜೆಪಿ ಸದಸ್ಯ *** ನೂತನ ರಂಗಮಂದಿರ ನಿರ್ಮಾಣ ಸಂಬಂಧ ನಮಗೆ ಪಿಪಿಟಿ ಪ್ರೆಸೆಂಟೇಷನ್ ಬೇಕು ಅಮಿನ್ ಮೊಹಿಸಿನ್ ಎಸ್‌ಡಿಪಿಐ ಸದಸ್ಯ. *** ರಂಗಮಂದಿರ ನಿರ್ಮಾಣ ನಿಜಕ್ಕೂ ಒಳ್ಳೆಯ ಚಿಂತನೆ. ಆದರೆ ಕಾಮಗಾರಿ ಮಾತ್ರ ಗುಣಮಟ್ಟದಿಂದ ಕೂಡಿರಬೇಕು ಅರುಣ್ ಶೆಟ್ಟಿ ಬಿಜೆಪಿ ಸದಸ್ಯ *** ಇದು ಒಳ್ಳೆಯ ಕೆಲಸ. ಮುಂದಿನ ದಸರೆ ಒಳಗೆ ಮುಗಿಸಿ ದಸರಾ ಕಾರ್ಯಕ್ರಮಗಳು ಅಲ್ಲಿಯೇ ನೆರವೇರುವಂತೆ ಮಾಡಿ ಮಹೇಶ್ ಜೈನಿ ಬಿಜೆಪಿ ಸದಸ್ಯ. *** ಸ್ಥಳೀಯ ಕಲಾವಿದರಿಗೆ ಸುಲಭ ದರದಲ್ಲಿ ಕೊಡಿ. ಪಕ್ಕದಲ್ಲೆ ಸರ್ಕಾರಿ ಜಾಗ ಇದೆ. ಅಲ್ಲಿ ವಾಹನ ನಿಲುಗಡೆ ಮಾಡಬಹುದು.
ಅನಿತಾ ಪೂವಯ್ಯ ಬಿಜೆಪಿ ಸದಸ್ಯೆ