ಗೋಣಿಕೊಪ್ಪಲು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕೊಡಗಿನ ತೊರೆ, ತೋಡುಗಳು ತುಂಬಿ ಹರಿಯುತ್ತಿವೆ.

ದಕ್ಷಿಣದ ಬ್ರಹ್ಮಗಿರಿ ತಪ್ಪಲಿನಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ನದಿಯು ತುಂಬಿ ಮೈದುಂಬಿ ಹರಿಯುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಕಾನೂರು, ಕೊಟ್ಟಗೇರಿ, ಬಾಳೆಲೆ, ನಿಟ್ಟೂರು ಭಾಗದಲ್ಲಿ ನದಿ ನೀರು ಹಳ್ಳಕೊಳ್ಳದ ಗದ್ದೆಗಳಿಗೆ ಆವರಿಸಲಿದೆ.

ಅಮ್ಮತ್ತಿ, ಗೋಣಿಕೊಪ್ಪಲು, ಕಿರುಗೂರು, ನಲ್ಲೂರು, ಮಾಯಮುಡಿ, ದೇವನೂರು, ರಾಜಾಪುರ ಭಾಗದಲ್ಲಿ ಹರಿಯುತ್ತಿರುವ ಕೀರೆಹೊಳೆ ಕೂಡ ಮೈ ದುಂಬಿಕೊಂಡಿದೆ. ಬುಧವಾರ ಬೆಳಿಗ್ಗೆಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದ್ದು, ತೀವ್ರತೆ ಕಡಿಮೆಯಾಗಿತ್ತು. ಮಳೆ ರಭಸ ಹೆಚ್ಚಾದರೆ ನದಿ ನೀರಿನ ಪ್ರಮಾಣದಲ್ಲಿಯೂ ಹೆಚ್ಚಳವಾಗುವ ಸಂಭವವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.