ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುತ್ತಪ್ಪ ತೆರೆ ಉತ್ಸವ ಆರಂಭ

Published 31 ಮಾರ್ಚ್ 2024, 5:35 IST
Last Updated 31 ಮಾರ್ಚ್ 2024, 5:35 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯುವ ಪೊನ್ನಂಪೇಟೆ ಮುತ್ತಪ್ಪ ದೇವರ ಉತ್ಸವ ಶುಕ್ರವಾರ ಸಂಜೆ ಆರಂಭಗೊಂಡಿತು.

ಪೊನ್ನಂಪೇಟೆಯ ಕುಂದ ರಸ್ತೆಯಲ್ಲಿರುವ ಮುತ್ತಪ ದೇವರ ಗುಡಿಯಲ್ಲಿ ಭಕ್ತರು ಮುತ್ತಪ್ಪ ತೆರೆಗೆ ಪೂಜೆ, ಪುನಸ್ಕಾರ, ಹರಕೆ ತೀರಿಸುವ ಮೂಲಕ ಭಕ್ತಿ ಮೆರೆದರು.

ಪ್ರತಿ ವರ್ಷ ನಡೆಯುವಂತೆ ಈ ಬಾರಿಯೂ ಮಾ.29ರಿಂದ 31 ರವರೆಗೆ ಸಾವಿರಾರು ಭಕ್ತರು ಪಾಲ್ಗೊಂಡು ವಿಜೃಂಭಣೆಯಿಂದ ದೇವರ ಉತ್ಸವ ನಡೆಸಿಕೊಡುತ್ತಿದ್ದಾರೆ. ದೇವಸ್ಥಾನದ ಮುಂದೆ ತಿಂಡಿ ತಿನಿಸುಗಳ ಹಾಗೂ ಮಕ್ಕಳ ಆಟಿಕೆಗಳ ಅಂಗಡಿಗಳು ಸಾಲುಗಟ್ಟಿವೆ.

ಗೋಣಿಕೊಪ್ಪಲು ಹರಿಶ್ಚಂದ್ರಪುರದ ಮುತ್ತಪ್ಪ ದೇವಸ್ಥಾನದಲ್ಲಿಯೂ 2 ದಿನ ನಡೆಯುವ ಉತ್ಸವಕ್ಕೆ ಶನಿವಾರ ಸಂಜೆ ಚಾಲನೆ ದೊರಕಿತು. ಭಕ್ತರು ಮುತ್ತಪ್ಪ ದೇವರ ತೆರೆ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ. ಗೋಣಿಕೊಪ್ಪಲು ಕೀಲೇರಿ ಮುತ್ತಪ್ಪ ಮಠಪುರ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ನಡೆಯುವ ಮುತ್ತಪ್ಪ ದೇವರ ಹಾಗೂ ಇತರ ದೇವತೆಗಳ ತೆರೆ ಉತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT