ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗಿನ ಹಲವೆಡೆ ನಾಗಾರಾಧನೆ

ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಆಚರಿಸಿದ ಭಕ್ತ ಸಮುದಾಯ
Published 9 ಆಗಸ್ಟ್ 2024, 15:54 IST
Last Updated 9 ಆಗಸ್ಟ್ 2024, 15:54 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ನಾಗರ ಪಂಚಮಿಯನ್ನು ಶುಕ್ರವಾರ ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಶ್ರಾವಣ ಮಾಸದ ಮೊದಲ ಹಬ್ಬ ಎನಿಸಿದ ನಾಗರಪಂಚಮಿ ಪ್ರಯುಕ್ತ ನಗರದ ಬಹುತೇಕ ನಾಗರಕಲ್ಲುಗಳನ್ನು ಭಕ್ತರು ಪೂಜಿಸಿದರು. ಹಾಲನೆರೆದು, ಪ್ರಸಾದ ವಿನಿಯೋಗ ನಡೆಸಿದರು.

ಇಲ್ಲಿನ ಮುತ್ತಪ್ಪ ದೇವಸ್ಥಾನ, ರಾಣಿಪೇಟೆ ಸೇರಿದಂತೆ ಹಲವು ದೇಗುಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ನಾಗರಕಲ್ಲುಗಳಿಗೆ ಎಳನೀರು, ಹಾಲಿನ ಅಭಿಷೇಕ ಮಾಡಿದರು.

ಕೆಲವರು ಭಕ್ತಿಯಿಂದ ಹಾಲನ್ನೆರೆದು ನೂರಿನ ದಾರದಿಂದ ತಯಾರಿಸಿದ ಹಾರವನ್ನು ವಿಗ್ರಹಕ್ಕೆ ಅರ್ಪಿಸಿ, ಇನ್ನೊಂದು ದಾರವನ್ನು ತಾವು ಹಾಕಿಕೊಂಡರು. ಕೆಲವರು ಹುತ್ತಕ್ಕೆ ಹಾಲೆರೆದು ಪೂಜಿಸಿದ್ದೂ ಕಂಡು ಬಂತು.

ನಾಗರಪಂಚಮಿ ಪ್ರಯುಕ್ತ ಮಡಿಕೇರಿಯಲ್ಲಿರುವ ಮುತ್ತಪ್ಪ ದೇಗುಲವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು
ನಾಗರಪಂಚಮಿ ಪ್ರಯುಕ್ತ ಮಡಿಕೇರಿಯಲ್ಲಿರುವ ಮುತ್ತಪ್ಪ ದೇಗುಲವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು
ಮಡಿಕೇರಿಯಲ್ಲಿನ ಮುತ್ತಪ್ಪ ದೇಗುಲದಲ್ಲಿ ನಾಗರಪಂಚಮಿ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶುಕ್ರವಾರ ಆಗಮಿಸಿದ್ದರು
ಮಡಿಕೇರಿಯಲ್ಲಿನ ಮುತ್ತಪ್ಪ ದೇಗುಲದಲ್ಲಿ ನಾಗರಪಂಚಮಿ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶುಕ್ರವಾರ ಆಗಮಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT