ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಮಡಿಕೇರಿ ಎನ್ ಸಿಸಿ 19 ಬೆಟಾಲಿಯನ್ ಘಟಕದಿಂದ ಜನರಲ್ ತಿಮ್ಮಯ್ಯ ಫೈರಿಂಗ್ ರೇಂಜ್ನಲ್ಲಿ ಬಂದೂಕು ತರಬೇತಿ ಶಿಬಿರ ಆಯೋಜಿಸಲಾಗಿತ್ತು.

ಬೆಟಾಲಿಯನ್ನ ಕ್ಯಾಂಪ್ ಕಮಾಂಡರ್ ಕರ್ನಲ್ ರಜತ್ ಮುಕುಂದನ್ ನೇತೃತ್ವದಲ್ಲಿ ಏಕತೆ ಮತ್ತು ಶಿಸ್ತು ಎಂಬ ಧೈರ್ಯದೊಂದಿಗೆ ನಡೆಯುತ್ತಿರುವ ಶಿಬಿರದಲ್ಲಿ ಕೊಡಗು ಹಾಗೂ ದಕ್ಷಿಣ ಕನ್ನಡದ ವಿವಿಧ ಕಾಲೇಜುಗಳಿಂದ 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈ ಬಗ್ಗೆ ಕ್ಯಾಂಪ್ ಕಮಾಂಡರ್ ಕರ್ನಲ್ ರಜತ್ ಮುಕುಂದನ್ ಮಾತನಾಡಿ,‘ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಬಂದೂಕು ತರಬೇತಿ, ನಾಯಕತ್ವ, ವ್ಯಕ್ತಿತ್ವ ವಿಕಸನ ತರಬೇತಿ, ಕ್ರೀಡಾ ಮನೋಭಾವ, ಸಮಾಜ ಸೇವೆ, ಸ್ವಚ್ಛತಾ ಅಭಿಯಾನದ ಬಗ್ಗೆ ಅರಿವು, ರಕ್ತದಾನದ ಬಗ್ಗೆ ಜಾಗೃತಿ, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸೇನೆಗೆ ಸೇರ ಬಯಸುವ ಕೆಡೆಟ್ಗಳಿಗೆ ಸಂಬಂಧಿಸಿದ ಮಾಹಿತಿ ಕಾರ್ಯಗಾರ ನಡೆಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ವಿಜ್ ಇನ್ನಿತರ ಸ್ಪರ್ಧೆಗಳ ಜೊತೆಗೆ ಶಿಸ್ತು, ಸಮಯ ಪಾಲನೆಗೆ ಹೆಚ್ಚು ಒತ್ತು ನೀಡಲಾಗುವುದು’ ಎಂದರು.

ಲೆಫ್ಟನೆಂಟ್ ಕರ್ನಲ್ ಶ್ರೀನಿವಾಸನ್, ಸುಬೇದಾರ್ ಮೇಜರ್ ಸಿಜು, ಸುಬೇದಾರ್ ಬುದ್ಧರಾಮ್, ಸಿ.ಹೆಚ್.ಎಂ.ದೀಪಕ್ ಗುರುಂಗ್, ಗರ್ಲ್ಸ್ ಕೆಡೆಟ್ ಜೀನ ತರಬೇತಿ ನೀಡಿದರು.

ಪ್ರಾಂಶುಪಾಲ ಪ್ರೊ.ಎಂ.ಬಿ.ಕಾವೇರಿಯಪ್ಪ, ಮೇಜರ್ ರಾಘವ, ಎಎನ್ ಓಗಳಾದ ಲೆಫ್ಟಿನೆಂಟ್ ಎಂ.ಅರ್.ಆಕ್ರಂ, ಭವಿತ, ಚೀಫ್ ಆಫೀಸರ್ ದಾಮೋದರ್, ಎನ್ಸಿಸಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.