ಪೊನ್ನಂಪೇಟೆ: ಸಂಸ್ಥೆಯು ಕಾರ್ಮಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಪ್ರತಿ ವರ್ಷ ಕಾರ್ಮಿಕರ ದಿನಾಚರಣೆ ಅಂಗವಾಗಿ ತಪ್ಪದೆ ಕ್ರೀಡಾಕೂಟ ಆಯೋಜಿಸಿಕೊಂಡು ಬರುತ್ತಿದೆ ಎಂದು ಟಾಟಾ ಕಾಫಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕೆ.ಜಿ ರಾಜೀವ್ ಅಭಿಪ್ರಾಯಪಟ್ಟರು.

ಪಾಲಿಬೆಟ್ಟದ ಟಾಟಾ ಕಾಫಿ ಮೈದಾನದಲ್ಲಿ ಕಾರ್ಮಿಕರ ದಿನದ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ತೋಟಗಳಲ್ಲಿ ವನ್ಯಮೃಗಗಳ ಹಾವಳಿ ಹೆಚ್ಚಾಗಿರುವ ಕಾರಣ ಕಾರ್ಮಿಕರು ಎಚ್ಚರದಿಂದ ಕೆಲಸ ಮಾಡಬೇಕಿದೆ. ವರ್ಷವಿಡೀ ದುಡಿಯುವ ಕಾರ್ಮಿಕ ವರ್ಗಕ್ಕೆ ಮನರಂಜನೆ ನೀಡುವ ಉದ್ದೇಶದಿಂದ ಕ್ರೀಡೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಕ್ರೀಡಾಜ್ಯೋತಿಯನ್ನು ಬೆಳಗುವ ಮೂಲಕ ಹಿರಿಯ ಪ್ರಧಾನ ವ್ಯವಸ್ಥಾಪಕ ಎಂ.ಬಿ ಗಣಪತಿ ಕಾರ್ಮಿಕರ ದಿನಾಚರಣೆಗೆ ಚಾಲನೆ ನೀಡಿದರು. ವಿವಿಧ ಭಾಗಗಳಿಂದ ಬಂದಿದ್ದ ಕಾರ್ಮಿಕರು ಪಥಸಂಚಲನ ನಡೆಸಿದರು.

ಕ್ರೀಡಾಕೂಟದಲ್ಲಿ ಗೋಣಿಚೀಲ ಓಟ, ಮಡಕೆ ಹೊತ್ತು ಓಟ, ಮೂರು ಕಾಲಿನ ಓಟ, ಹಗ್ಗಜಗ್ಗಾಟ ಗಮನಸೆಳೆದವು.

ಕ್ರೀಡಾ ಸಂಚಾಲಕ ಕಿರಣ್ ಮಾಧವನ್ ಹಾಗೂ ಕ್ರೀಡಾ ಸಲಹೆಗಾರ ಸಿ.ಯು ಅಶೋಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.