ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು: ವಾಹನಗಳ ನಿಲುಗಡೆ ನಿಷೇಧ

Published 22 ಸೆಪ್ಟೆಂಬರ್ 2023, 13:40 IST
Last Updated 22 ಸೆಪ್ಟೆಂಬರ್ 2023, 13:40 IST
ಅಕ್ಷರ ಗಾತ್ರ

ನಾಪೋಕ್ಲು: ನಾಪೋಕ್ಲು ಪಟ್ಟಣದಲ್ಲಿ ಶನಿವಾರ ಗಣೇಶೋತ್ಸವದ ಅಂಗವಾಗಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶನಿವಾರ ಪಟ್ಟಣದ ಮುಖ್ಯಬೀದಿಗಳಲ್ಲಿ ವಾಹನ ನಿಲುಗಡೆ ಮಾಡದಂತೆ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಪ್ರಕಟಣೆ ಹೊರಡಿಸಿದ್ದಾರೆ.

ಇಂದಿರಾ ನಗರದ ವಿವೇಕಾನಂದ ಗಣೇಶೋತ್ಸವ ಸೇವಾ ಸಮಿತಿ, ಹಳೆ ತಾಲ್ಲೂಕಿನ ಪೊನ್ನು ಮುತ್ತಪ್ಪ ವಿನಾಯಕ ಸೇವಾ ಸಮಿತಿ, ಪಟ್ಟಣದ ರಾಮಮಂದಿರ ದೇವಸ್ಥಾನ ಸಮಿತಿ, ಹಳೆ ತಾಲ್ಲೂಕು ಭಗವತಿ ದೇವಸ್ಥಾನದ ಗಣೇಶೋತ್ಸವ ಸಮಿತಿ ಹಾಗೂ ಕಕ್ಕುಂದ ಕಾಡು ವೆಂಕಟೇಶ್ವರ ದೇವಸ್ಥಾನದ ಗಣೇಶ ವಿಗ್ರಹಗಳ ವಿಸರ್ಜನಾ ಕಾರ್ಯಕ್ರಮ ಶನಿವಾರ ಪಟ್ಟಣದಲ್ಲಿ ಸಾಗಿ ಮೂರ್ತಿಗಳನ್ನು ಕಾರೆಕಾಡು ಬಳಿಯ ಕಾವೇರಿ ಹೊಳೆ ಸೇತುವೆ ಬಳಿ ವಿಸರ್ಜನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಹಳೆ ತಾಲ್ಲೂಕಿನಿಂದ ಮಾರುಕಟ್ಟೆಯವರೆಗೆ, ನಾಪೋಕ್ಲು ಬಸ್ ನಿಲ್ದಾಣದಿಂದ ಬೇತು ರಸ್ತೆಯ ಮಕ್ಕಿ ದೇವಸ್ಥಾನದ ಕಮಾನುಗೇಟ್ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಬಾರದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT