ಮಡಿಕೇರಿ: ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ನಾಗಶ್ರೀ ಗೌಡ ಅಲ್ಲಿನ ಬಿಡುವಿರದ ಜೀವನ ಬಿಟ್ಟು ಬಂದಿದ್ದು ಮಂಜಿನ ನಗರಿಗೆ. ಮೂಲತಃ ಕೊಡಗರಹಳ್ಳಿಯವರಾದ ಅವರು, ಮಡಿಕೇರಿ ನಗರದಲ್ಲೇ ಅಣಬೆ ಬೇಸಾಯ ಆರಂಭಿಸಿ ಯಶಸ್ವಿಯಾದರು. ಕೇವಲ ಅಣಬೆ ಬೇಸಾಯ ಮಾತ್ರವಲ್ಲ, ಅಣಬೆಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನೂ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ.

ಇವರಿಗೆ ಜೊತೆಯಾಗಿ ನಿಂತವರು ಗೆಳತಿ ಧೃತಿ ದೇವಜನ. ಸದ್ಯ, ಇವರಿಬ್ಬರು ಸೇರಿ ಇಲ್ಲಿನ ಪಾಪ್ಯೂಲರ್ ಕಟ್ಟಡದಲ್ಲಿ ಮಳಿಗೆಯೊಂದನ್ನು ಬಾಡಿಗೆಗೆ ಪಡೆದು, ಅಲ್ಲಿ ಸದ್ದಿಲ್ಲದೇ ಕಳೆದ ವರ್ಷದಿಂದ ಅಣಬೆ ಬೇಸಾಯ ಮಾಡುತ್ತಿದ್ದಾರೆ.

ಇವರು ಬೆಳೆಯುತ್ತಿರುವುದು ರಾಸಾಯನಿಕ ಮುಕ್ತ ಅಣಬೆ ಎಂಬ ಕಾರಣಕ್ಕೆ ಇದೀಗ ಬೇಡಿಕೆ ಹೆಚ್ಚಿದೆ. ಅದೂ ಅಲ್ಲದೇ, ಹೆಚ್ಚಾಗಿ ಸಿಗುವ ‘ಬಟನ್ ಅಣಬೆ’ಯ ಬದಲಿಗೆ ಇವರು ‘ಆಯಿಸ್ಟರ್ ಅಣಬೆ’ ಬೆಳೆಯುವುದರಿಂದಲೂ ಹೆಚ್ಚಿನ ಮಂದಿ ಬಂದು ಖರೀದಿಸುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನಾಗಶ್ರೀ, ‘ಬೆಂಗಳೂರಿನಲ್ಲಿ 6 ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ದುಡಿದು ಅದನ್ನು ತೊರೆದು ಇಲ್ಲಿಗೆ ಬಂದೆ. ಕಳೆದೊಂದು ವರ್ಷದಿಂದ ಅಣಬೆ ಬೇಸಾಯ ಮಾಡುತ್ತಿದ್ದು, ಈಚೆಗೆ ಅಣಬೆಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನೂ ತಯಾರಿಸುತ್ತಿರುವೆ. ಇದಕ್ಕೆಲ್ಲ ನನ್ನ ಗೆಳತಿ ಧೃತಿ, ನಮ್ಮಲ್ಲಿ ಕೆಲಸ ಮಾಡುತ್ತಿರುವ ಮಮತಾ ಹಾಗೂ ನನ್ನ ಗೆಳತಿಯರಾದ ತಶ್ವಿನಿ, ಭವ್ಯಾ, ಸುಕೀರ್ತಿ, ಧನ್ಯಾ ಸಾಕಷ್ಟು ನೆರವಾಗಿದ್ದಾರೆ’ ಎಂದು ಹೇಳಿದರು.

‘ಮಶ್ ಡಿಲೈಟ್ಸ್’ ಎಂಬ ಬ್ರಾಂಡ್ ಹೆಸರಿನಲ್ಲಿ ತಾವು ಬೆಳೆದ ಅಣಬೆಗಳನ್ನು ಮಾರಾಟ ಮಾಡುತ್ತಿರುವ ಇವರಲ್ಲಿಗೆ ದಿನಕ್ಕೆ 4 ಕೆ.ಜಿಯಷ್ಟು ಅಣಬೆಯನ್ನು ಸಾರ್ವಜನಿಕರೇ ನೇರವಾಗಿ ಖರೀದಿಸುತ್ತಾರೆ. ಇದಲ್ಲದೇ ಬೆಂಗಳೂರಿಗೂ ಇವರ ಉತ್ಪನ್ನಗಳು ರವಾನೆಯಾಗುತ್ತಿವೆ.

ದಿನಕ್ಕೆ ಕನಿಷ್ಠ ಎಂದರೂ 10ರಿಂದ 13 ಕೆ.ಜಿಯಷ್ಟು ಅಣಬೆಯನ್ನು ಇವರು ಬೆಳೆಯುತ್ತಾರೆ. ಅಣಬೆ ಒಣಗಿಸುವ ಯಂತ್ರದಲ್ಲಿ ಒಣಗಿಸಿ, ಅದನ್ನು ಪುಡಿ ಮಾಡಿ, ಅದರಿಂದ ಸಾಂಬಾರ್ ಪುಡಿ, ಚಟ್ನಿ ಪುಡಿ, ಬಿಸ್ಕತ್ತು, ಚಕ್ಕುಲಿ ತಯಾರಿಸುತ್ತಾರೆ. ತಾಜಾ ಅಣಬೆಯ ಉಪ್ಪಿನಕಾಯಿಯೂ ಇವರಲ್ಲಿ ಲಭ್ಯ. ಈಗ ಇವುಗಳಿಗೂ ಹೆಚ್ಚಿನ ಬೇಡಿಕೆ ಇದೆ.

ಇವರಿಗೆ ಕೃಷಿ ಇಲಾಖೆಯ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯಡಿ ನೆರವು ಸಿಕ್ಕಿದೆ. ಸಂಪರ್ಕಕ್ಕೆ– ಮೊ: 9353846504

ದಿನಕ್ಕೆ ಕನಿಷ್ಠ ಎಂದರೂ 10ರಿಂದ 13 ಕೆ.ಜಿ ಅಣಬೆ ಉತ್ಪಾದನೆ ಅಣಬೆ ಬೆಳೆಯಲು ಬೇಕಿದೆ 30 ದಿನ ಸ್ಟಾರ್ಟ್ ಅಪ್ ಆರಂಭಿಸಿ ಯಶಸ್ಸು ಕಂಡ ಯುವತಿಯರು

ಸ್ವ ಉದ್ಯೋಗ ಕೈಗೊಳ್ಳಲು ಅಣಬೆ ಬೇಸಾಯ ಮಾತ್ರವಲ್ಲ ಇನ್ನೂ ಅನೇಕ ಕ್ಷೇತ್ರಗಳಿವೆ. ಆಸಕ್ತರು ಸ್ವ ಉದ್ಯೋಗದ ಕಡೆಗೆ ಗಮನಹರಿಸಬಹುದು.
ಧೃತಿ ದೇವಜನ ಸ್ವಉದ್ಯೋಗಿ.

ಅಣಬೆ ತಯಾರಿಕೆ ಹೇಗೆ? ನಿತ್ಯ ನಾಗಶ್ರೀ ಗೌಡ ಅವರು 70ರಿಂದ 80 ಬ್ಯಾಗ್ಗಳಿಗೆ ಅಣಬೆ ಬೀಜ ಹಾಕುತ್ತಾರೆ. 30 ದಿವಸಗಳಲ್ಲಿ ಅವು ಬೆಳೆದು ಕೊಯ್ಲಿಗೆ ಸಿದ್ಧವಾಗುತ್ತವೆ. ನಿತ್ಯ 10–13 ಕೆ.ಜಿಯಷ್ಟು ಅಣಬೆಯನ್ನು ಇವರು ಕೊಯ್ಲು ಮಾಡುತ್ತಾರೆ. ‘ಆಯಿಸ್ಟರ್ ಅಣಬೆ’ಯಲ್ಲಿ ಹಲವು ಬಗೆಯ ಪೌಷ್ಠಿಕಾಂಶಗಳು ಇವು. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಇದು ಸಹಕಾರಿ. ಹಾಗಾಗಿ ನಾವು ಇದೇ ಅಣಬೆಯನ್ನು ರಾಸಾಯನಿಕ ರಹಿತವಾಗಿ ಬೆಳೆಯುತ್ತಿದ್ದೇವೆ’ ಎಂದು ನಾಗಶ್ರೀ ಹೇಳಿದರು.

ಅಣಬೆ ಮೌಲ್ಯವರ್ಧನೆ ಮುಖ್ಯ; ನೀರಜಾ

‘ಅಣಬೆಯ ಆಯಸ್ಸು ಕಡಿಮೆ. ಅದರಿಂದ ಹೆಚ್ಚಿನ ಅಣಬೆ ಬೇಸಾಯಗಾರರು ಲಾಭ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದನ್ನು ಒಂದು ಅಥವಾ ಎರಡು ದಿನಗಳಲ್ಲಿ ಮಾರಾಟ ಮಾಡಲೇಬೇಕಿರುತ್ತದೆ. ಇಲ್ಲದಿದ್ದರೆ ಹಾಳಾಗುತ್ತದೆ. ಹಾಗಾಗಿ ಅಣಬೆ ಬೇಸಾಯದಲ್ಲಿ ಹೆಚ್ಚಿನ ಲಾಭ ಪಡೆಯಬೇಕಾದರೆ ಅದರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವುದು ಮುಖ್ಯ’ ಎಂದು ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯ ಜಿಲ್ಲಾ ಸಂಪನ್ಮೂಲ ಹಾಗೂ ಜಿಲ್ಲಾ ತರಬೇತುದಾರರಾದ ನೀರಜಾ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈ ಬಗೆಯ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಈ ಯೋಜನೆ ನೆರವು ನೀಡುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.