ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ; ಧರ್ಮಸ್ಥಳಕ್ಕೆ ಮಾರ್ಚ್ 5ರಿಂದ ಪಾದಯಾತ್ರೆ

Published 27 ಫೆಬ್ರುವರಿ 2024, 4:17 IST
Last Updated 27 ಫೆಬ್ರುವರಿ 2024, 4:17 IST
ಅಕ್ಷರ ಗಾತ್ರ

ಶನಿವಾರಸಂತೆ: ಮಹಾ ಶಿವರಾತ್ರಿ ಪ್ರಯುಕ್ತ ಇಲ್ಲಿಯ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಾರ್ಚ್ 5ರಿಂದ 7ರವರೆಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 26ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಪಾದಯಾತ್ರಿಗಳು ಮಾರ್ಚ್ 5ರಂದು ಬೆಳಿಗ್ಗೆ 8.30ಕ್ಕೆ ಶನಿವಾರಸಂತೆ ಮುಖ್ಯರಸ್ತೆಯಲ್ಲಿರುವ ಗಣಪತಿ ದೇವಾಲಯಕ್ಕೆ ಬಂದು ದೇವರಿಗೆ ಪೂಜೆ ಸಲ್ಲಿಸಿ, ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆ ಹೊರಡುವುದು.

ಪಾದಯಾತ್ರೆಯು ಶನಿವಾರಸಂತೆ, ಚಂಗಡಹಳ್ಳಿ, ಕೂಡುರಸ್ತೆ, ವನಗೂರು, ಬಿಸ್ಲೆ, ಸುಬ್ರಹ್ಮಣ್ಯ ಮಾರ್ಗವಾಗಿ ಎಡಕ್ಕೆ ಕಡಬ ರಸ್ತೆ ಮೂಲಕ ಮಾರ್ದಾಳ, ಇಜಲಂಪಾಡಿ ಹೊಳೆ, ಕೊಕ್ಕಡ ಮಾರ್ಗವಾಗಿ ಸಂಚರಿಸಿ ಮಾರ್ಚ್ 7ರಂದು ಧರ್ಮಸ್ಥಳವನ್ನು ತಲುಪುತ್ತದೆ.

ಮಾಹಿತಿಗೆ ಮೊ: 9448648509 ಹಾಗೂ 9480093949 ಸಂಪರ್ಕಿಸಬಹುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT