ಭಾನುವಾರ, ಏಪ್ರಿಲ್ 11, 2021
33 °C

ಸುಂಟಿಕೊಪ್ಪ: ಪಿಯುಸಿ ಫಲಿತಾಂಶ, ನೋವಿನ ನಡುವೆ ಪ್ರಕೃತಿಯ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಸುಂಟಿಕೊಪ್ಪ: ಕಾರು ಅಪಘಾತದಲ್ಲಿ ಮನೆಯವರೆಲ್ಲರನ್ನೂ ಕಳೆದುಕೊಂಡಿದ್ದ ಸುಂಟಿಕೊಪ್ಪದ ನಿಡ್ಯಮನೆಯ ಪ್ರಕೃತಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 92 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಪ್ರಕೃತಿ. 

ಪ್ರಕೃತಿಯನ್ನು ನೋಡುವುದಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ತೆರಳುತ್ತಿದ್ದ ತನ್ನ ತಂದೆ, ಸುಂಟಿಕೊಪ್ಪ ಅಂಚೆ ಕಚೇರಿ ಸಿಬ್ಬಂದಿಯಾಗಿದ್ದ ನಿಡ್ಯಮನೆ ಅಶೋಕ, ಶಿಕ್ಷಕಿಯಾಗಿದ್ದ ತಾಯಿ ಹೇಮಾವತಿ, ಸಹೋದರ– ಸಹೋದರಿ ಪ್ರಯಾಣಿಸುತ್ತಿದ್ದ ಕಾರು ಸುಳ್ಯದ ಬಳಿ ನಿಯಂತ್ರಣ ತಪ್ಪಿ ಕೆರೆಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. 

ತನ್ನ ಮನೆಯವರನ್ನು ಕಳೆದುಕೊಂಡ ನೋವಿನ ನಡುವೆಯೂ ಪಿಯುನಲ್ಲಿ ಪ್ರಕೃತಿ ಉತ್ತಮ ಸಾಧನೆ ತೋರಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು