ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಜಿಟಿಜಿಟಿ ಮಳೆ: ಒಣಗಿಸಿರುವ ಕಾಫಿ ಬೀಜಕ್ಕೆ ಹಾನಿ

Published 4 ಜನವರಿ 2024, 6:47 IST
Last Updated 4 ಜನವರಿ 2024, 6:47 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಕೆಲವೆಡೆ ಗುರುವಾರ ಮಳೆ ಆರಂಭವಾಗಿದೆ.

ನಾಪೋಕ್ಲು ಹೋಬಳಿ ಹಾಗೂ ಮಡಿಕೇರಿ ಭಾಗದಲ್ಲಿ ಮಳೆ ಬೀಳುತ್ತಿದ್ದು, ಕಾಫಿ ಹಣ್ಣುಗಳು ಹಾಳಾಗುವ ಭೀತಿ ಎದುರಾಗಿದೆ.

ಬಹುತೇಕ ಕಡೆ ಕಾಫಿ ಕೊಯ್ಲು ಮಾಡಿ ಒಣಗಲು ಹರಡಲಾಗಿತ್ತು. ಬೀಳುತ್ತಿರುವ ಜಿಟಿಜಿಟಿ ಮಳೆಯಿಂದ ಈ ಹಣ್ಣು ಮಾತ್ರವಲ್ಲ ಗಿಡದಲ್ಲಿರುವ ಹಣ್ಣು ಕೂಡ ಹಾಳಾಗುವ ಸಾಧ್ಯತೆ ಇದೆ.

ಮುಂದಿನ 5 ದಿನಗಳ ಕಾಲ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿರುವುದರಿಂದ ಮೋಡಗಳು ಹೆಚ್ಚಾಗಿ ಕೇರಳ ಹಾಗೂ ಕೊಡಗಿನತ್ತ ಬರುತ್ತಿವೆ. ಇದರಿಂದ ಮುಂದಿನ 5 ದಿನಗಳ ಕಾಲ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ‌. ಕೆಲವೊಂದು ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT