ಸೋಮವಾರ, ಏಪ್ರಿಲ್ 6, 2020
19 °C

ಅತ್ಯಾಚಾರ ಆರೋಪ: ಜಮಾತ್ ಅಧ್ಯಕ್ಷನ ವಿರುದ್ಧ ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಮಹಿಳೆಯ ಅತ್ಯಾಚಾರ ಆರೋಪದ ಮೇಲೆ ಎಮ್ಮೆಮಾಡು ಜಮಾತ್‌ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ವಿರುದ್ಧ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಗ್ರಾಮದ ಮಹಿಳೆ ಹಾಜಿ ವಿರುದ್ಧ ದೂರು ಸಲ್ಲಿಸಿದ್ದು ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ. ಪತಿ ಹಾಗೂ ಮಕ್ಕಳೊಂದಿಗೆ ಎಮ್ಮೆಮಾಡಿನಲ್ಲಿ ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

‘ಮನೆಯ ಮಾಲೀಕ ಹಾಜಿ ಕುಟುಂಬಸ್ಥರು ಈಚೆಗೆ ಮಡಿಕೇರಿಗೆ ತೆರಳಿದ್ದರು. ಅಂದು ಮಧ್ಯಾಹ್ನ ಖಾದರ್ ಹಾಜಿಗೆ ಊಟ ನೀಡಲು ತೆರಳಿದ್ದಾಗ ಅತ್ಯಾಚಾರಕ್ಕೆ ಯತ್ನಿಸಿದರು. ಘಟನೆಯ ಮಾಹಿತಿ ನೀಡಿದಲ್ಲಿ ತಾನು ಜಮಾತ್‌ ಅಧ್ಯಕ್ಷನಾಗಿದ್ದು ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಸಿದ್ದರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಎಮ್ಮೆಮಾಡು ಜಮಾತ್‌ಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು