ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ತವ್ಯದಲ್ಲಿದ್ದಾಗಲೇ ಸೈನಿಕ ಹೃದಯಾಘಾತದಿಂದ ಸಾವು

Last Updated 12 ಅಕ್ಟೋಬರ್ 2022, 4:59 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ತಾಕೇರಿ ಗ್ರಾಮದ ಸೈನಿಕ ನಾಪಂಡ ಮಹೇಶ್ (46) ಉತ್ತರಖಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ಅವರು ಭಾರತೀಯ ಭೂ ಸೇನೆಯ ಎಲೆಕ್ಟ್ರಾನಿಕ್ಸ್ ಆಂಡ್ ಮೆಕಾನಿಕಲ್ ಎಂಜಿನಿಯರ್ಸ್ (ಇಎಂಇ) ವಿಭಾಗದಲ್ಲಿ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 1999ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದ ಅವರು, ಹೈದರಾಬಾದ್, ಬೆಂಗಳೂರು, ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರು.

ಇಲ್ಲಿನ ತಮ್ಮ ಮನೆಯ ಸುತ್ತ ಕಾಂಪೌಂಡ್ ನಿರ್ಮಿಸುತ್ತಿರುವ ಕುರಿತು ಮಧ್ಯಾಹ್ನ 12 ಗಂಟೆಗೆ ಪತ್ನಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದರು. ಬಳಿಕ ಅರ್ಧ ಗಂಟೆಯಲ್ಲೇ ಬಂದ ನಿಧನ ಸುದ್ದಿಯಿಂದಾಗಿ ಇಡೀ ಕುಟುಂಬ ದುಖಃಸಾಗರದಲ್ಲಿ ಮುಳುಗಿದೆ.

ಮೃತರಿಗೆ ಪತ್ನಿ ವಿನಂತಿ, ತಾಯಿ ಮಲ್ಲಿಗೆ, ಪುತ್ರಿ, ಪುತ್ರ ಇದ್ದಾರೆ. ಪಾರ್ಥಿವ ಶರೀರವು ಬುಧವಾರ ಸಂಜೆ ಅಥವಾ ಗುರುವಾರ ಗ್ರಾಮಕ್ಕೆ ತಲುಪಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT