ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಹಿಂದಿನ ಸಾಲಿಗಿಂತ ₹ 32.5 ಸಾವಿರ ಹೆಚ್ಚುವರಿ ಆದಾಯ ಗಳಿಸಿತು.

ಆಡಳಿತಾಧಿಕಾರಿ ನವೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಕ್ರಿಯೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಮಾಂಸ, ಮೀನು ಮಾರಾಟ ಮಳಿಗೆ, ಸಂತೆ ಸುಂಕ, ಎತ್ತುವಳಿ ಹಾಗೂ ಬಸ್ ನಿಲ್ದಾಣ ಸುಂಕ ಎತ್ತುವಳಿ ಹಕ್ಕುಗಳ ಹರಾಜು ಪ್ರಕ್ರಿಯೆ ನಡೆಯಿತು.

ಕಳೆದ ಬಾರಿ ಕೋಳಿ ಮಾಂಸ ಮಾರಾಟದ ಮಳಿಗೆ ಸಂಖ್ಯೆ 3 ವಾರ್ಷಿಕ ₹ 45 ಸಾವಿರಕ್ಕೆ ಹರಾಜಾಗಿತ್ತು. ಈ ಬಾರಿ ಅದು ₹ 47 ಸಾವಿರ, ₹ 2.30 ಲಕ್ಷಕ್ಕೆ ಹರಾಜಾಗಿದ್ದ ಮಳಿಗೆ ಸಂಖ್ಯೆ 4 ಈ ಬಾರಿ ₹ 2.31 ಲಕ್ಷ, ₹ 2.32 ಲಕ್ಷಕ್ಕೆ ಹರಾಜಾಗಿದ್ದ ಮಳಿಗೆ ಸಂಖ್ಯೆ 6 ಈ ಬಾರಿ ₹ 2.34 ಲಕ್ಷಕ್ಕೆ ಹರಾಜಾಯಿತು.

ಕುರಿ ಮಾಂಸ ಮಾರಾಟ ಮಳಿಗೆ ಸಂಖ್ಯೆ 5 ಕಳೆದ ವರ್ಷ ₹ 28 ಸಾವಿರಕ್ಕೆ ಹರಾಜಾಗಿದ್ದರೆ ಈ ಬಾರಿ ₹ 31 ಸಾವಿರ, ಮಳಿಗೆ ಸಂಖ್ಯೆ 7 ₹ 1.50 ಲಕ್ಷದಿಂದ ₹ 1.56 ಲಕ್ಷ, ಮಳಿಗೆ ಸಂಖ್ಯೆ 10-32 ಸಾವಿರದಿಂದ ₹ 34 ಸಾವಿರಕ್ಕೆ ಹರಾಜಾಗಿದೆ.

ಹಸಿಮೀನು ಮಾರಾಟ ಮಳಿಗೆ ಸಂಖ್ಯೆ 8 ಕಳೆದ ಬಾರಿ ₹ 1.72 ಲಕ್ಷಕ್ಕೆ ಹರಾಜಾಗಿದ್ದರೆ ಈ ಬಾರಿ ₹ 1.74 ಲಕ್ಷ, ಮಳಿಗೆ ಸಂಖ್ಯೆ 9 ₹ 1.10 ಲಕ್ಷದಿಂದ ₹ 1.13 ಲಕ್ಷ, ಮಳಿಗೆ ಸಂಖ್ಯೆ 11 ₹ 1.31 ಲಕ್ಷದಿಂದ ₹ 1.33 ಲಕ್ಷಕ್ಕೆ ಹರಾಜಾಯಿತು.

ಸಂತೆ ಸುಂಕ ಎತ್ತುವಳಿ ಹಕ್ಕನ್ನು ಕಳೆದ ಬಾರಿ ₹ 9.38 ಲಕ್ಷಕ್ಕೆ ನೀಡಿದ್ದರೆ, ಈ ಬಾರಿ ₹ 9.45 ಲಕ್ಷ, ಬಸ್ ನಿಲ್ದಾಣದ ಸುಂಕ ಎತ್ತುವಳಿ ಹಕ್ಕನ್ನು ಕಳೆದ ಬಾರಿ ₹ 47,500ಕ್ಕೆ ನೀಡಿದ್ದರೆ, ಈ ಬಾರಿ ₹ 50 ಸಾವಿರಕ್ಕೆ ಹರಾಜು ಮಾಡಲಾಯಿತು.

ಒಟ್ಟಾರೆ ಕುರಿ, ಕೋಳಿ, ಹಸಿ ಮೀನು ಮಾರಾಟ ಮಳಿಗೆ, ಸಂತೆ ಹಾಗೂ ಬಸ್ ನಿಲ್ದಾಣ ಸುಂಕ ಎತ್ತುವಳಿ ಹಕ್ಕನ್ನು ಕಳೆದ ಬಾರಿ ₹ 21,15,500ಕ್ಕೆ ಹರಾಜು ಮಾಡಿದ್ದರೆ, ಈ ಬಾರಿ ₹ 21.48 ಲಕ್ಷಕ್ಕೆ ಹರಾಜು ಮಾಡುವ ಮೂಲಕ ವಾರ್ಷಿಕ ₹ 32.5 ಸಾವಿರ ಪಂಚಾಯಿತಿಗೆ ಅಧಿಕ ಆದಾಯ ಬಂದಿದೆ.

ಹಂದಿ ಮಾಂಸ ಮಾರಾಟ ಮಳಿಗೆಗೆ ಯಾರೂ ಸಹ ಟೆಂಡರ್‌ನಲ್ಲಿ ಭಾಗವಹಿಸದ ಕಾರಣ ಮುಂದೂಡಲಾಯಿತು.

ಟೆಂಡರ್ ಸಭೆಯಲ್ಲಿ ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರಾದ ಪಿ.ಕೆ. ಚಂದ್ರು, ಮೃತ್ಯುಂಜಯ, ಜೀವನ್, ಬಿ.ಆರ್. ಮಹೇಶ್, ಜಯಂತಿ ಶಿವಕುಮಾರ್, ಬಿ.ಸಿ. ವೆಂಕಟೇಶ್, ಮೋಹಿನಿ, ಶುಭಕರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.