ಸೋಮವಾರಪೇಟೆ: ಪಟ್ಟಣದಲ್ಲಿ ವರಮಹಾಲಕ್ಷ್ಮೀ ಪೂಜೆ ಸಿದ್ಧತೆ ನಡೆಯುತ್ತಿದ್ದರೂ, ಮಾರುಕಟ್ಟೆಯಲ್ಲಿ ಖರೀದಿ ನೀರಸವಾಗಿದೆ.
ಕಳೆದ ವರ್ಷ ಅಕ್ಕಪಕ್ಕದ ಜಿಲ್ಲೆಯಿಂದ ಸಾಕಷ್ಟು ಹೂ, ಹಣ್ಣು ಮತ್ತಿತ್ತರ ಪೂಜಾ ಸಾಮಾಗ್ರಿಗಳ ವ್ಯಾಪಾರಿಗಳು ಆಗಮಿಸಿ ವ್ಯಾಪಾರ ಮಾಡುತ್ತಿದ್ದರು. ಈ ವರ್ಷ ಕೆಲವೇ ಕೆಲವು ವ್ಯಾಪಾರಿಗಳು ಆಗಮಿಸಿದ್ದಾರೆ.
ಕೊಣನೂರು ಗ್ರಾಮದ ಹೂ ವ್ಯಾಪಾರಿ ಸಚಿನ್ ಮಾತನಾಡಿ, ‘ಸೇವಂತಿಗೆ ಮಾರು ಒಂದಕ್ಕೆ ₹ 150 ಬೆಲೆ ಇದ್ದು, ಈ ಭಾರಿ ವ್ಯಾಪಾರಸ್ಥರ ಸಂಖ್ಯೆ ಕಡಿಮೆ ಇರುವುದು ಲಾಭ ಹೆಚ್ಚು ನೋಡಬಹುದು’ ಎಂದು ಆಶಿಸಿದರು.