ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಜಪೇಟೆ: ಭಗತ್ ಸಿಂಗ್ ತಂಡಕ್ಕೆ ಸಮಗ್ರ ಪ್ರಶಸ್ತಿ

Published 28 ಜನವರಿ 2024, 15:33 IST
Last Updated 28 ಜನವರಿ 2024, 15:33 IST
ಅಕ್ಷರ ಗಾತ್ರ

ವಿರಾಜಪೇಟೆ: ಪಟ್ಟಣದ ಚಾಣಕ್ಯ ಕೋಚಿಂಗ್ ಸೆಂಟರ್‌‌‌‌‌ನ ಕ್ರೀಡಾ ದಿನಾಚರಣೆ ಅಂಗವಾಗಿ ಭಾನುವಾರ ನಡೆದ ಕ್ರೀಡಾಕೂಟದಲ್ಲಿ ಭಗತ್ ಸಿಂಗ್ ತಂಡವು ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.

ಸಮೀಪದ ಐಮಂಗಲದಲ್ಲಿ ನಡೆದ ಕ್ರೀಡಾಕೂಟದಲ್ಲಿ ಚಂದ್ರಶೇಖರ್ ಅಜಾದ್ ತಂಡ ಎರಡನೇ ಸ್ಥಾನ ಪಡೆದುಕೊಂಡಿತು.  ಫುಟ್ಬಾಲ್ ಅಂತಿಮ ಪಂದ್ಯದಲ್ಲಿ ಭಗತ್ ಸಿಂಗ್ ತಂಡವು 6-1 ಗೋಲುಗಳಿಂದ ರಾಜ್ ಗುರು ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಕಬಡ್ಡಿ ಅಂತಿಮ ಪಂದ್ಯದಲ್ಲಿ ಭಗತ್ ಸಿಂಗ್ ತಂಡವು ಚಂದ್ರಶೇಖರ್ ಅಜಾದ್ ತಂಡವನ್ನು ಮಣಿಸಿ ಪ್ರಶಸ್ತಿ ಪಡೆದುಕೊಂಡಿತು.

ಬಾಲಕರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಚಂದ್ರಶೇಖರ್ ಅಜಾದ್ ತಂಡವು ರಾಜ್ ಗುರು ತಂಡವನ್ನು ಮಣಿಸಿ ಪ್ರಶಸ್ತಿ ಪಡೆಯಿತು. ಬಾಲಕಿಯರ ವಿಭಾಗದ ಹಗ್ಗಜಗ್ಗಾಟದಲ್ಲಿ ಸಿಮ್ರಿನ್ ನೇತೃತ್ವದ ರಾಜಗುರು ತಂಡ ಪ್ರಶಸ್ತಿ ಪಡೆದುಕೊಂಡರೆ, ಪೂರ್ಣಿಮಾ ನೇತೃತ್ವದ ಚಂದ್ರಶೇಖರ್ ಅಜಾದ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ವಿರಾಜಪೇಟೆಯ ಚಾಣಕ್ಯ ಕೋಚಿಂಗ್ ಸೆಂಟರ್ನ ಕ್ರೀಡಾ ದಿನಾಚರಣೆಯ ಅಂಗವಾಗಿ ಭಾನುವಾರ ನಡೆದ ಕ್ರೀಡಾಕೂಟದಲ್ಲಿ ಚಂದ್ರಶೇಖರ್ ಅಜಾದ್ ತಂಡವು ಎರಡನೇ ಸ್ಥಾನವನ್ನು ಪಡೆದುಕೊಂಡಿತು.
ವಿರಾಜಪೇಟೆಯ ಚಾಣಕ್ಯ ಕೋಚಿಂಗ್ ಸೆಂಟರ್ನ ಕ್ರೀಡಾ ದಿನಾಚರಣೆಯ ಅಂಗವಾಗಿ ಭಾನುವಾರ ನಡೆದ ಕ್ರೀಡಾಕೂಟದಲ್ಲಿ ಚಂದ್ರಶೇಖರ್ ಅಜಾದ್ ತಂಡವು ಎರಡನೇ ಸ್ಥಾನವನ್ನು ಪಡೆದುಕೊಂಡಿತು.

ಬಾಲಕರ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಅಫ್ನಾಝ್ ಪ್ರಥಮ, ಜನೀಶ್ ದ್ವಿತೀಯ, ಬಾಲಕಿಯರ ವಿಭಾಗದ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಪೂರ್ಣಿಮಾ ಪ್ರಥಮ, ಸಿಮ್ರಿನ್ ದ್ವಿತೀಯ, ವಿಷದ ಚೆಂಡು ಸ್ಪರ್ಧೆಯಲ್ಲಿ ಪೂರ್ಣಿಮ ಪ್ರಥಮ, ತೇಜಸ್ ದ್ವಿತೀಯ ಸ್ಥಾನ, 100ಮೀ ಓಟದ ಸ್ಪರ್ಧೆಯಲ್ಲಿ ಲಕ್ಷ್ಮಿ ಪ್ರಥಮ, ತಾನಿಯ ದ್ವಿತೀಯ ಸ್ಥಾನ, ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಸಿಮ್ರಿನ್ ಪ್ರಥಮ, ದ್ವಿತೀಯ ಸಿಯಾ ಗ್ಲೋರಿ ದ್ವಿತೀಯ ಸ್ಥಾನ ಪಡೆದರು.

ವಿರಾಜಪೇಟೆಯ ಚಾಣಕ್ಯ ಕೋಚಿಂಗ್ ಸೆಂಟರ್ನ ಕ್ರೀಡಾ ದಿನಾಚರಣೆಯ ಅಂಗವಾಗಿ ಭಾನುವಾರ ನಡೆದ ಫುಟ್ಬಾಲ್ ಅಂತಿಮ ಪಂದ್ಯದಲ್ಲಿ ಭಗತ್ ಸಿಂಗ್ ತಂಡವು ರಾಜ್ ಗುರು ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.
ವಿರಾಜಪೇಟೆಯ ಚಾಣಕ್ಯ ಕೋಚಿಂಗ್ ಸೆಂಟರ್ನ ಕ್ರೀಡಾ ದಿನಾಚರಣೆಯ ಅಂಗವಾಗಿ ಭಾನುವಾರ ನಡೆದ ಫುಟ್ಬಾಲ್ ಅಂತಿಮ ಪಂದ್ಯದಲ್ಲಿ ಭಗತ್ ಸಿಂಗ್ ತಂಡವು ರಾಜ್ ಗುರು ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿನೋದ್ ಕುಮಾರ್ ಆರ್ ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ಚಾಣಕ್ಯ ಎಜುಕೇಶನ್ ಟ್ರಸ್ಟ್‌‌‌ನ ಅಧ್ಯಕ್ಷೆ ಕವಿತಾ ಟಿ.ಎನ್, ಉಪನ್ಯಾಸಕ ಸುಬ್ಬಯ್ಯ, ರಮ್ಯ, ಮೋನಿಕಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT