ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಗೃಹರಕ್ಷಕರ ಕ್ರೀಡಾಕೂಟ ಸಂಪನ್ನ

Published 18 ಡಿಸೆಂಬರ್ 2023, 5:50 IST
Last Updated 18 ಡಿಸೆಂಬರ್ 2023, 5:50 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ನೂರಾರು ಗೃಹ ರಕ್ಷಕರು 2 ದಿನಗಳ ಕಾಲ ಇಲ್ಲಿ ನಡೆದ ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು.

ಕೊಡಗು ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಇಲ್ಲಿ ಭಾನುವಾರ ಮುಕ್ತಾಯಗೊಂಡ ಗೃಹರಕ್ಷಕರ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸುಮಾರು 8ಕ್ಕೂ ಅಧಿಕ ಕ್ರೀಡೆಗಳು ನಡೆದವರು. ವಿರಾಜಪೇಟೆಯ ಪಿ.ಸಿ.ಮೇದಪ್ಪ ಹಾಗೂ ಕುಶಾಲನಗರದ ಎಚ್.ಆರ್.‍ಪಲ್ಲವಿ ಅವರು ಹೆಚ್ಚಿನ ಬಹುಮಾನಗಳನ್ನು ತಮ್ಮದಾಗಿಸಿಕೊಂಡು ಪಾರಮ್ಯ ಮೆರೆದರು.

ಉಪವಿಭಾಗಾಧಿಕಾರಿ ಡಾ.ಯತೀಶ್‌ ಉಳ್ಳಾಲ್ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಂದರ್‌ರಾಜ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

ವಿಜೇತರ ವಿವರ:

ಪುರುಷರ ವಿಭಾಗ

100 ಮೀಟರ್ ಓಟ: ಪಿ.ಸಿ.ಮೇದಪ್ಪ, ವಿರಾಜಪೇಟೆ (ಪ್ರ), ಎಚ್.ಎಲ್.ಗಣೇಶ್, ವಿರಾಜಪೇಟೆ (ದ್ವಿ)

800 ಮೀಟರ್ ಓಟ: ಪಿ.ಸಿ.ಮೇದಪ್ಪ, ವಿರಾಜಪೇಟೆ (ಪ್ರ), ಮದಬ್ ಬೈರಾಗಿ, ವಿರಾಜಪೇಟೆ (ದ್ವಿ)

ರಿಲೇ: ಮದಬ್‌ ಬೈರಾಗಿ, ವಿರಾಜಪೇಟೆ (ಪ್ರ), ವೈ.ಎನ್.ಕವನ್‌ಕುಮಾರ್, ಮಡಿಕೇರಿ (ದ್ವಿ)

ಉದ್ದ ಜಿಗಿತ: ‍‍ಪಿ.ಸಿ.ಮೇದಪ್ಪ, ವಿರಾಜಪೇಟೆ (ಪ್ರ), ಎಂ.ಜಿ.ಸತೀಶ್‌, ವಿರಾಜಪೇಟೆ (ದ್ವಿ)

ಎತ್ತರ ಜಿಗಿತ: ಪಿ.ಸಿ.ಮೇದಪ್ಪ, ವಿರಾಜಪೇಟೆ (ಪ್ರ), ಬಿ.ಎಲ್.ಮನು (ದ್ವಿ)

ಗುಂಡು ಎಸೆತ: ಎ.ಪಿ.ಗಗನ್, ಮಡಿಕೇರಿ (ಪ್ರ), ಎಂ.ಜಿ.ಸತೀಶ್, ವಿರಾಜಪೇಟೆ (ದ್ವಿ)

ಕಬಡ್ಡಿ: ವೈ.ಎನ್‌.ಕವನ್‌ಕುಮಾರ್ ನೇತೃತ್ವದ ಮಡಿಕೇರಿ ತಂಡ (ಪ್ರ), ಈ.ಬಿ.ಲೋಕೇಶ್ ನೇತೃತ್ವದ ಶನಿವಾರಸಂತೆ ತಂಡ(ದ್ವಿ)

ವಾಲಿಬಾಲ್: ವೈ.ಎನ್.ಕವನ್‌ಕುಮಾರ್ ನೇತೃತ್ವದ ಮಡಿಕೇರಿ ತಂಡ (ಪ್ರ), ಈ.ಬಿ.ಲೋಕೇಶ್ ನೇತೃತ್ವದ ಶನಿವಾರಸಂತೆ ತಂಡ (ದ್ವಿ)

ಹಗ್ಗಜಗ್ಗಾಟ: ಈ.ಬಿ.ಲೋಕೇಶ್, ಶನಿವಾರಸಂತೆ (ಪ್ರ), ಬಿ.ಎಸ್.ಪುಟ್ಟರಾಜು, ಕುಶಾಲನಗರ (ದ್ವಿ)

ಮಹಿಳೆಯರ ವಿಭಾಗ

100 ಮೀಟರ್ ಓಟ: ಎಚ್.ಆರ್.‍ಪಲ್ಲವಿ, ಕುಶಾಲನಗರ (ಪ್ರ), ಕೆ.ಸಿ.ಪಲ್ಲವಿ, ವಿರಾಜಪೇಟೆ (ದ್ವಿ)

400 ಮೀಟರ್ ಓಟ: ಎಚ್.ಆರ್.ಪಲ್ಲವಿ, ಕುಶಾಲನಗರ (ಪ್ರ), ಕ.ನಿತ್ಯಾ, ಕುಶಾಲನಗರ (ದ್ವಿ)

ರಿಲೇ: ಎಚ್.ಆರ್.ಪಲ್ಲವಿ, ಕುಶಾಲನಗರ (ಪ್ರ), ಕೆ.ಎಸ್.ಲಕ್ಷ್ಮೀ, ಮಡಿಕೇರಿ (ದ್ವಿ)

ಹಗ್ಗಜಗ್ಗಾಟ: ಎಚ್.ಟಿ.ಪುಷ್ಪಾವತಿ, ಮಡಿಕೇರಿ (ಪ್ರ), ಕೆ.ಸಿ.ಪಲ್ಲವಿ, ವಿರಾಜಪೇಟೆ (ದ್ವಿ)

ಕೊಡಗು ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಮಡಿಕೇರಿಯಲ್ಲಿ ಭಾನುವಾರ ಮುಕ್ತಾಯಗೊಂಡ ಗೃಹರಕ್ಷಕರ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ಬಹುಮಾನ ವಿತರಿಸಿದರು. ಉಪವಿಭಾಗಾಧಿಕಾರಿ ಡಾ.ಯತೀಶ್‌ ಉಳ್ಳಾಲ್ ಚಾಲನೆ ಇದ್ದಾರೆ
ಕೊಡಗು ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಮಡಿಕೇರಿಯಲ್ಲಿ ಭಾನುವಾರ ಮುಕ್ತಾಯಗೊಂಡ ಗೃಹರಕ್ಷಕರ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ಬಹುಮಾನ ವಿತರಿಸಿದರು. ಉಪವಿಭಾಗಾಧಿಕಾರಿ ಡಾ.ಯತೀಶ್‌ ಉಳ್ಳಾಲ್ ಚಾಲನೆ ಇದ್ದಾರೆ
ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರು
ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT