ಶನಿವಾರ, ಮೇ 15, 2021
25 °C
ಅಸ್ವಸ್ಥಗೊಂಡ ತಾಯಿಯೂ ಆಸ್ಪತ್ರೆಗೆ ದಾಖಲು

ಕೊಡಗು: ಹೊಳೆಯಲ್ಲಿ ಮುಳುಗಿ ಯುವಕ ಸಾವು; ಹೃದಯಾಘಾತದಿಂದ ಅಜ್ಜಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಬಾಶೀರ್

ಸುಂಟಿಕೊಪ್ಪ (ಕೊಡಗು): ಸಮೀಪದ ಹೊಸತೋಟ ಬಳಿಯ ಹಾರಂಗಿ ಹಿನ್ನೀರಿನಲ್ಲಿ ಗುರುವಾರ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ 2ನೇ ಐಗೂರು ನಿವಾಸಿ ರಮ್ಲಾನ್ ಅವರ ಪುತ್ರ ಮುಬಾಶೀರ್ (18) ಎಂಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ವಿಷಯ ತಿಳಿದು ಯುವಕನ ಅಜ್ಜಿ ರುಕಿಯಾ (62) ಅವರೂ ಹೃದಯಾಘಾತದಿಂದ ನಿಧನರಾದ ಹೃದಯವಿದ್ರಾವಕ ಘಟನೆ ನಡೆದಿದೆ. ಯುವಕನ ತಾಯಿಯೂ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.   

ಹೊಸತೋಟ ಹಾಗೂ ಐಗೂರಿವಿನ 11 ಮಂದಿ ಯುವಕರು ಗುರುವಾರ ಬೆಳಿಗ್ಗೆ ಫುಟ್‌ಬಾಲ್ ಆಡಲು ತೆರಳಿದ್ದರು. ನಂತರ, ಸ್ನಾನ ಮಾಡಲೆಂದು ಮುಬಾಶೀರ್ ಹೊಳೆಗೆ ಇಳಿದಿದ್ದಾನೆ. ಆದರೆ, ಮೇಲೆ ಬರಲು ಸಾಧ್ಯವಾಗಿರಲಿಲ್ಲ. ಅದನ್ನು ಕಣ್ಣಾರೆ ಕಂಡಿದ್ದ ಉಳಿದವರ ಅಲ್ಲಿಂದ ತೆರಳಿದ್ದರು. 

ಗುರುವಾರ ರಾತ್ರಿ 10 ಗಂಟೆಯಾದರೂ ಮುಬಾಶೀರ್‌ ಮನೆಗೆ ಬಂದಿರಲಿಲ್ಲ. ಸ್ನೇಹಿತರನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಿಗ್ಗೆ ಯುವಕನ ಮೃತದೇಹ ಪತ್ತೆಯಾಗಿದೆ. ಈ ವಿಷಯ ತಿಳಿದು ಅಜ್ಜಿ ನಿಧನರಾದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದರು.

ಸುಂಟಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು