ಮಂಗಳವಾರ, ಆಗಸ್ಟ್ 3, 2021
22 °C

ಕೋವಿಡ್‌ ನೆಗೆಟಿವ್‌ ನಕಲಿ ಸಂದೇಶ ತೋರಿಸಿ ಪ್ರವೇಶ: ಕೇರಳದ ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಸಮೀಪದ ಪೆರುಂಬಾ ಡಿಯಲ್ಲಿ ಕೋವಿಡ್ ನೆಗೆಟಿವ್‌ ವರದಿ ಇಲ್ಲದೇ ರಾಜ್ಯ ಪ್ರವೇಶಿಸಿದ್ದ ಕೇರಳದ ಮೂವರನ್ನು ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಕೇರಳದ ಇರಿಟ್ಟಿಯ ಕೂಟುಪೂಳೆ ನಿವಾಸಿಗಳಾದ ವಿಷ್ಣು ಪ್ರಸಾದ್, ಅರುಣ್ ವರ್ಗೀಸ್ ಮತ್ತು ನೌಷದ್ ಬಂಧಿತ ಆರೋಪಿಗಳು.

ಲಾರಿಯಲ್ಲಿ ಕೆಂಪುಕಲ್ಲು ತುಂಬಿಕೊಂಡು ಮಾಕುಟ್ಟ ಮೂಲಕ ಬುಧವಾರ ರಾತ್ರಿ ಕೇರಳದ ಕಡೆಯಿಂದ ಪೆರುಂಬಾಡಿಯಲ್ಲಿನ ಚೆಕ್‌ಪೋಸ್ಟ್‌ಗೆ ಬಂದಿದ್ದಾರೆ. ಈ ಸಂದರ್ಭ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಲಾರಿ ಚಾಲಕ ಸೇರಿದಂತೆ ಮೂವರು ಆರೋಪಿಗಳ ಬಳಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಕೇಳಿದ್ದಾರೆ. ಈ ಸಂದರ್ಭ ಲಾರಿ ಚಾಲಕ ವಿಷ್ಣು ಪ್ರಸಾದ್, ಪ್ರಮಾಣ ಪತ್ರದ ಪ್ರತಿ ಇಲ್ಲ. ಆದರೆ ಮೊಬೈಲ್‌ನಲ್ಲಿ ಕೊರೊನಾ ನೆಗೆಟಿವ್ ಸಂದೇಶ ಇರುವುದಾಗಿ ಹೇಳಿದ್ದಾನೆ.

ಮೊಬೈಲ್‌ನ ಸಂದೇಶದ ನೈಜತೆಯನ್ನು ಪೊಲೀಸರು ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಸಂದೇಶ ನಕಲಿಯೆಂದು ತಿಳಿದು ಬಂದಿದೆ. ಮೂವರನ್ನು ಬಂಧಿಸಿದ ಇಲ್ಲಿನ ನಗರಠಾಣೆಯ ಪೊಲೀಸರು, ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ
ಒಪ್ಪಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು