ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಜಪೇಟೆ ಪ.ಪಂ ಸಭೆ ಬಹಿಷ್ಕಾರ

ಕೊರೊನಾ ಲಸಿಕೆ ವಿಚಾರ ಹಾಗೂ ಅಧಿಕಾರಿಗಳ ಗೈರುಹಾಜರಿ ಕಾರಣ
Last Updated 13 ಏಪ್ರಿಲ್ 2021, 6:34 IST
ಅಕ್ಷರ ಗಾತ್ರ

ವಿರಾಜಪೇಟೆ: ಕೊರೊನಾ ಲಸಿಕೆ ಹಾಗೂ ಅಧಿಕಾರಿಗಳ ಗೈರುಹಾಜರಿ ಕಾರಣಕ್ಕೆ ಪಟ್ಟಣ ಪಂಚಾಯಿತಿಯ ಮಾಸಿಕ ಸಭೆಯನ್ನು ಸದಸ್ಯರುಸೋಮವಾರ ಬಹಿಷ್ಕರಿಸಿದರು.

ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ಆರಂಭ ಆಗುತ್ತಿದ್ದಂತೆ ಬಿಜೆಪಿ ಸದಸ್ಯ ಮಹಾದೇವ್ ಮಾತನಾಡಿ, ‘ಪಟ್ಟಣದ ಗಾಂಧಿನಗರದಲ್ಲಿ ಏ.11 ರಂದು 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಯಿತು. ಈ ಕುರಿತು ಪಂಚಾಯಿತಿಯ ಮುಖ್ಯಾಧಿಕಾರಿ ಯಾವುದೇ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಚುನಾಯಿತ ಜನಪ್ರತಿನಿಧಿಗಳಿಗೆ ಬೆಲೆ ಇಲ್ಲವೇ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ನಾಮನಿರ್ದೇಶಿತ ಸದಸ್ಯರನ್ನು ಹೊರತುಪಡಿಸಿ ಉಳಿದ ಎಲ್ಲ ಸದಸ್ಯರು ಧ್ವನಿಗೂಡಿಸಿ ಆಕ್ಷೇಪ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಪ್ರತಿಕ್ರಿಯಿಸಿ, ‘ಗಾಂಧಿನಗರದಲ್ಲಿ ಕೊರೊನಾ ಲಸಿಕೆ ನೀಡುವುದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ. ಸರ್ಕಾರದ ಆದೇಶದಂತೆ ತುರ್ತು ಕಾರ್ಯವಾದ ಕಾರಣಕ್ಕೆ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ಜತೆಗೆ ಗಾಂಧಿನಗರ ವಾರ್ಡ್‌ ಪಂಚಾಯಿತಿ ಸದಸ್ಯೆಗೆ ಈ ಕುರಿತು ಮಾಹಿತಿ ನೀಡಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.

ನಂತರ ಕಾಂಗ್ರೆಸ್ ಸದಸ್ಯರಾದ ರಂಜಿ ಪೂಣಚ್ಚ, ಮಹಮ್ಮದ್ ರಫಿ, ರಾಜೇಶ್, ಜೆಡಿಎಸ್ ಸದಸ್ಯ ಮತೀನ್, ಪಕ್ಷೇತರ ಸದಸ್ಯೆ ದೇಚಮ್ಮ, ‘ಸಭೆಗೆ ಪಂಚಾಯಿತಿಯ ಎಂಜಿನಿಯರ್, ಕಂದಾಯ ಅಧಿಕಾರಿ, ಸೆಸ್ಕ್ ಹಾಗೂ ಪೊಲೀಸ್ ಇಲಾಖೆಯವರು ಗೈರು ಹಾಜರಾಗಿದ್ದಾರೆ. ಅಧಿಕಾರಿಗಳಿಲ್ಲದ ಕಾರಣ ಸಭೆಯನ್ನು ಬಹಿಷ್ಕರಿಸುತ್ತಿದ್ದೇವೆ’ ಎಂದು ಸಭೆಯಿಂದ ಹೊರ ನಡೆದರು.

ನಾಮನಿರ್ದೇಶಕ ಸದಸ್ಯರನ್ನು ಹೊರತುಪಡಿಸಿ ಆಡಳಿತ ಪಕ್ಷದ ಉಳಿದ ಸದಸ್ಯರು ಸಭೆಯಿಂದ ಹೊರನಡೆದರು.

ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ‘ಇಂದಿನ ಸಭೆ ನಡೆಯದಿದ್ದರೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ರವಾನಿಸಿದಂತಾಗುತ್ತದೆ. ಕೋರಂ ಇರುವುದರಿಂದ ಸಭೆ ನಡೆಸಿ. ಎಂಜಿನಿಯರ್ ಬದಲಿಗೆ ಸದಸ್ಯರ ಪ್ರಶ್ನೆಗಳಿಗೆ ನಾನೇ ಉತ್ತರಿಸುತ್ತೇನೆ’ ಎಂದು ಪಂಚಾಯಿತಿ ಅಧ್ಯಕ್ಷರನ್ನು ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ.

ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಹರ್ಷವರ್ಧನ್, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ, ನಾಮನಿರ್ದೇಶಿತ ಸದಸ್ಯರಾದ ಕೂತಂಡ ಸಚಿನ್, ಇ.ಸಿ.ಜೀವನ್, ಸುನೀತಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT