ಮಡಿಕೇರಿ: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ‘ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗುರುವಾರ ಕೊಡವ ವಾರಿಯರ್ಸ್ ಹಾಗೂ ರಾಯಲ್ ಟೈಗರ್ಸ್ ತಂಡಗಳು ಗೆಲುವು ಸಾಧಿಸಿದವು.

ಕೊಡವ ವಾರಿಯರ್ಸ್ ತಂಡವು ಟೀಂ ಲೀವರೇಜ್ ವಿರುದ್ಧ 11 ರನ್‌ಗಳ ರೋಚಕ ಗೆಲುವು ಪಡೆಯಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಗೆಲುವು ಕೊನೆಯವರೆಗೂ ತೂಗೂಯ್ಯಾಲೆಯಲ್ಲೇ ಇತ್ತು.

ಮೊದಲಿಗೆ ಬ್ಯಾಟ್ ಮಾಡಿದ ಕೊಡವ ವಾರಿಯರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 112 ರನ್‌ಗಳಿಸಿತು. ಗುರಿಯನ್ನು ಬೆನ್ನತ್ತಿದ ಟೀಂ ಲೀವರೇಜ್ 8 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿತಾದರೂ ಗೆಲುವಿನ ದಡವನ್ನು ಮುಟ್ಟಲಾಗಲಿಲ್ಲ. 3 ವಿಕೆಟ್ ಪಡೆದು ಎದುರಾಳಿ ತಂಡವನ್ನು ಸಮರ್ಥವಾಗಿ ನಿಯಂತ್ರಿಸಿದ ಸಜನ್ ನಂದೀರ ಅವರು ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

ಮತ್ತೊಂದು ಪಂದ್ಯದಲ್ಲಿ ರಾಯಲ್ ಟೈಗರ್ಸ್ ತಂಡವು ಟೀಮ್ ವೈಲ್ಡ್ ಫ್ಲವರ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು. ಟೀಮ್ ವೈಲ್ಡ್ ಫ್ಲವರ್ ನೀಡಿದ 132 ರನ್‌ಗಳ ಗುರಿಯನ್ನು ರಾಯಲ್ ಟೈಗರ್ಸ್ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು ತಲುಪಿತು.

4 ವಿಕೆಟ್ ಪಡೆದು 12 ಎಸೆತಗಳಲ್ಲಿ 17 ರನ್ ಗಳಿಸಿದ ಅಪ್ಪಯ್ಯ ಅವರು ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.