ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಜಪೇಟೆ | ಗಾಂಜಾ: ನಾಲ್ವರ ಬಂಧನ

Published 10 ಜುಲೈ 2024, 15:34 IST
Last Updated 10 ಜುಲೈ 2024, 15:34 IST
ಅಕ್ಷರ ಗಾತ್ರ

ವಿರಾಜಪೇಟೆ: ಮಾದಕವಸ್ತು ಗಾಂ‌ಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿ, 5 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

 ಪೆರುಂಬಾಡಿಯ ತಂಗುದಾಣವೊಂದರ ಬಳಿ ಕಾರ್ಯಾಚರಣೆ ನಡೆಸಿದ ನಗರ ಠಾಣೆಯ ಪೊಲೀಸರು ಪೆರುಂಬಾಡಿ ಗ್ರಾಮದ ನಿವಾಸಿಗಳಾದ ಶಫೀಕ್, ಮಹಮ್ಮದ್ ಆಸೀಂ, ಸಮೀರ್ ಹಾಗೂ ಮುನೀರ್ ಎಂಬುವವರೆ ಬಂಧಿತರು.  ಇಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳಿಂದ 1.8 ಕೆ.ಜಿ ಗಾಂಜಾ , 4 ದ್ವಿಚಕ್ರ ವಾಹನ,1 ಕಾರನ್ನು ಮುಟ್ಟುಗೋಲುಹಾಕಲಾಗಿದೆ.  
 
ಡಿವೈಎಸ್ಪಿ ಮೋಹನ್ ಕುಮಾರ್, ಸಿ.ಪಿ.ಐ ಶಿವರುದ್ರ ಮಾರ್ಗದರ್ಶನದಲ್ಲಿ, ನಗರ  ಠಾಣೆ ಪಿಎಸ್‌ಐ ರವೀಂದ್ರ, ಮಂಜುನಾಥ್, ಗಿರೀಶ್, ಕೆ.ಎಂ.ಧರ್ಮ, ಸತೀಶ್ ಬಿ.ವಿ, ಮೋಹನ್ ಟಿ.ಕೆ, ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT