ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವಿರಾಜಪೇಟೆ: ಇನ್ನಷ್ಟು ಬೇಕಿದೆ ಬಸ್ ನಿಲ್ದಾಣ

ಹೇಮಂತ್ ಎಂ.ಎನ್
Published : 17 ಜೂನ್ 2025, 6:13 IST
Last Updated : 17 ಜೂನ್ 2025, 6:13 IST
ಫಾಲೋ ಮಾಡಿ
Comments
ವಿರಾಜಪೇಟೆಯ ಸಮೀಪದ ಪೆರುಂಬಾಡಿಯಲ್ಲಿ ಬಸ್ ತಂಗುದಾಣವೊಂದರ ಚಾವಣಿ ಸಂಪೂರ್ಣ ಕಳಚಿ ಬಿದ್ದಿರುವುದು
ವಿರಾಜಪೇಟೆಯ ಸಮೀಪದ ಪೆರುಂಬಾಡಿಯಲ್ಲಿ ಬಸ್ ತಂಗುದಾಣವೊಂದರ ಚಾವಣಿ ಸಂಪೂರ್ಣ ಕಳಚಿ ಬಿದ್ದಿರುವುದು
ಬಸ್ ಡಿಪೊಗೆ ಬೇಡಿಕೆ:
ತಾಲ್ಲೂಕು ಕೇಂದ್ರವಾಗಿರುವ ವಿರಾಜಪೇಟೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಬೇಕು ಎನ್ನುವ ಬೇಡಿಕೆ ಹಿಂದೆಯಿಂದಲೂ ಇದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದವರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣದಿಂದ ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ರಾತ್ರಿ 8ರ ಬಳಿಕ ಹಾಗೂ ಸಿದ್ದಾಪುರ-ಕುಶಾಲನಗರ ಕಡೆಗೆ ರಾತ್ರಿ 7ರ ಬಳಿಕ ಬಸ್‌ಗಳಿಲ್ಲ. ಬಸ್ ಡಿಪೊ ಪ್ರಾರಂಭವಾದರೆ ರಾತ್ರಿ ಹಾಗೂ ಬೆಳಿಗ್ಗೆ ಪ್ರಮುಖ ಪ್ರದೇಶಗಳಿಗೆ ಬಸ್ ಸಂಚಾರ ಆರಂಭವಾಗಬಹುದು ಎನ್ನುವ ನಿರೀಕ್ಷೆ ಇದೆ.
ವಿರಾಜಪೇಟೆಯ ಸಮೀಪದ ಪೆರುಂಬಾಡಿಯಲ್ಲಿ ಬಸ್ ತಂಗುದಾಣವೊಂದು ಗಿಡಗಂಟಿ ಬೆಳೆದು ಸಾರ್ವಜನಿಕರ ಬಳಕೆ ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ
ವಿರಾಜಪೇಟೆಯ ಸಮೀಪದ ಪೆರುಂಬಾಡಿಯಲ್ಲಿ ಬಸ್ ತಂಗುದಾಣವೊಂದು ಗಿಡಗಂಟಿ ಬೆಳೆದು ಸಾರ್ವಜನಿಕರ ಬಳಕೆ ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ
ಈ ಹಿಂದೆ ಇತ್ತು ಎನ್ನಲಾದ ತಂಗುದಾಣಗಳ ಬಗ್ಗೆ ಅಧ್ಯಕ್ಷರು ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಿ‌ ಕ್ರಮ ಕೈಗೊಳ್ಳಲಾಗಿವುದು
ನಾಚಪ್ಪ‌ ಮುಖ್ಯಾಧಿಕಾರಿ ವಿರಾಜಪೇಟೆ ಪುರಸಭೆ
ಕೆಡವಿದ ತಂಗುದಾಣ ನಿರ್ಮಿಸಿ
ವಿರಾಜಪೇಟೆ ಪಟ್ಟಣದ ಮೂರ್ನಾಡು ಜಂಕ್ಷನ್ ಹಾಗೂ ಮಾಂಸದ ಮಾರುಕಟ್ಟೆಯ ಜಂಕ್ಷನ್‌ನಲ್ಲಿದ್ದ ಸಾಕಷ್ಟು ಹಳೆಯ ಬಸ್ ತಂಗುದಾಣವನ್ನು ಕೆಡವಲಾಗಿದೆ. ಈ ತಂಗುದಾಣಗಳಿಂದ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ಕೂಡಲೇ ಹಿಂದೆ ಇದ್ದ ಈ ಎರಡು ಸ್ಥಳಗಳಲ್ಲಿ ತಂಗುದಾಣವನ್ನು ಮರು ನಿರ್ಮಾಣ ಮಾಡಬೇಕು -ಎಚ್.ಬಿ.ಸತೀಶ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿ
ದುಸ್ಥಿತಿಯಲ್ಲಿ ಬಸ್‌ ನಿಲ್ದಾಣ
ಗ್ರಾಮದಲ್ಲಿ ಹಾದುಹೋಗಿರುವ ಹೆದ್ದಾರಿಯಲ್ಲಿ ಕೇರಳದ ಕಡೆಗೆ ಸಾಗುವ ಬಸ್‌ಗಳನ್ನು ಹತ್ತುವ ಬದಿಯಲ್ಲಿಯೇ ಬಸ್ ತಂಗುದಾಣವಿದೆ. ದುಸ್ಥಿತಿಯಲ್ಲಿರುವ ಈ ತಂಗುದಾಣದ ಬದಲಿಗೆ ಅದರ ವಿರುದ್ಧದ ಮತ್ತೊಂದು ಬದಿಯಲ್ಲಿ ಅಂದರೆ ವಿರಾಜಪೇಟೆ ಪಟ್ಟಣದ ಕಡೆಗೆ ಸಾಗುವಲ್ಲಿ ಬಸ್ ಹತ್ತಲು ಅನುಕೂಲವಾಗುವಂತೆ ತಂಗುದಾಣ ನಿರ್ಮಿಸಿದರೆ ಪಟ್ಟಣದಲ್ಲಿನ ಶಾಲಾ-ಕಾಲೇಜುಗಳಿಗೆ ನಿತ್ಯ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ-ಮಜೀದ್ ಪೆರುಂಬಾಡಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT