ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು | ಕಾಡು ಹಂದಿಗಳ ಉಪಟಳ: ಬೆಳೆ ನಾಶ

Published 23 ಡಿಸೆಂಬರ್ 2023, 13:10 IST
Last Updated 23 ಡಿಸೆಂಬರ್ 2023, 13:10 IST
ಅಕ್ಷರ ಗಾತ್ರ

ನಾಪೋಕ್ಲು: ಭತ್ತ ಕಟಾವಿನ ಹಂತದಲ್ಲಿ ಬೆಳೆಗಾರರು ಕಾಡು ಹಂದಿಗಳ ಉಪಟಳದಿಂದ ಕಂಗೆಟ್ಟಿದ್ದಾರೆ.

‘ಮಳೆ ಮೋಡ ವಾತಾವರಣದಿಂದ ಕೊಯ್ಲು ತಡವಾಗಿತ್ತು. ಇದೀಗ ಕಾಡು ಹಂದಿಗಳು ಇಳುವರಿಯನ್ನು ಸಂಪೂರ್ಣ ತಿಂದು ನಾಶಪಡಿಸುತ್ತಿವೆ. ರಾತ್ರಿ ಹೊತ್ತಿನಲ್ಲಿ ಗದ್ದೆಗಳಿಗೆ ನುಗ್ಗುವ ಕಾಡು ಹಂದಿಗಳು ಬೆಳೆಯನ್ನು ದ್ವಂಸಪಡಿಸುತ್ತಿವೆ’ ಎಂದು ಬೆಳೆಗಾರರು ಅವಲತ್ತುಗೊಂಡಿದ್ದಾರೆ.

ಇಲ್ಲಿಗೆ ಸಮೀಪದ ಹಳೆ ತಾಲ್ಲೂಕಿನ ಕಾಶಿ ನಂಜಪ್ಪ, ಜಾಲಿ ಪೂವಪ್ಪ ಅವರ ಗದ್ದೆಯಲ್ಲಿ ಕಾಡುಹಂದಿಗಳಿಂದ ಇಳುವರಿ ನಾಶವಾಗಿದೆ.

‘ರೈತರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಇದೀಗ ಕೊಯ್ಲಿನ ಅವಧಿಯಲ್ಲಿ ಕಾಡುಹಂದಿಗಳ ಉಪಟಳ ವಿಪರೀತವಾಗಿದೆ.ನಷ್ಟಕ್ಕೊಳಗಾದ ರೈತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು’ ರೈತ ಜಾಲಿ ಪೂವಪ್ಪ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT