ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಮಳೆ ಕಣ್ಮರೆ

ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಹಿನ್ನಡೆ
Last Updated 1 ಜೂನ್ 2013, 12:35 IST
ಅಕ್ಷರ ಗಾತ್ರ

ಮಡಿಕೇರಿ: ಜೂನ್ ತಿಂಗಳು ಆರಂಭವಾದರೂ ಮುಂಗಾರು ಮಳೆ ಕೊಡಗಿನಲ್ಲಿ ಕಣ್ಮರೆಯಾಗಿದೆ. ಇದರಿಂದಾಗಿ ಕುಡಿಯುವ ನೀರು ಪೂರೈಕೆ ಹಾಗೂ ಕೃಷಿ, ತೋಟಗಾರಿಕಾ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ಜನವರಿಯಿಂದ ಈವರೆಗಿನ ವಾಡಿಕೆ ಸರಾಸರಿ ಮಳೆಗಿಂತ ಶೇ 25 ಕ್ಕಿಂತ ಕಡಿಮೆ ಮಳೆಯಾಗಿದೆ. ಐದು ತಿಂಗಳಲ್ಲಿ (2013ರ ಜನವರಿಯಿಂದ ಇಲ್ಲಿಯವರೆಗೆ) ಕೇವಲ ಸರಾಸರಿ ಶೇ 74.76 ಮಳೆ ಆಗಿದೆ.

ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 245.50 ಮಿಲಿ ಮೀಟರ್‌ಗಳಾಗಿದ್ದು, 2013ರ ಜನವರಿಯಿಂದ ಈವರೆಗೆ 183.55ಮಿ.ಮೀ., ಮಳೆಯಾಗಿದೆ. 2012ರ ಇದೇ ಅವಧಿಯಲ್ಲಿ 187.55ಮಿ.ಮೀ. ಮಳೆಯಾಗಿದ್ದು, 2011 ರ ಇದೇ ಅವಧಿಯಲ್ಲಿ 255.10 ಮಿ.ಮೀ. ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 2013ರ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 253.60ಮಿ.ಮೀ., ಆದರೆ ಜನವರಿಯಿಂದ ಇಲ್ಲಿಯವರೆಗೆ 245.14ಮಿ.ಮೀ. ಮಳೆಯಾಗಿದೆ. 2012ರ ಇದೇ ಅವಧಿಯಲ್ಲಿ 195.18 ಮಿ.ಮೀ. ಮಳೆಯಾಗಿತ್ತು. 2011ರ ಇದೇ ಅವಧಿಯಲ್ಲಿ 316.35 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 211.30 ಮಿ.ಮೀ. ಗಳಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಶೇ.205.42ಮಿ.ಮೀ. ಮಳೆಯಾಗಿದೆ. 2012ರ ಇದೇ ಅವಧಿಯಲ್ಲಿ 216.83 ಮಿ.ಮೀ. ಮಳೆಯಾಗಿತ್ತು. ಹಾಗೆಯೇ 2011ರ ಇದೇ ಅವಧಿಯಲ್ಲಿ 201.66 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 271.60 ಮಿ.ಮೀ. ಅಗಿದ್ದು, ಶೇ.36.85ರಷ್ಟು ಮಾತ್ರ ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಶೇ.100.08ರಷ್ಟು ಮಳೆಯಾಗಿದೆ. 2012ರ ಇದೇ ಅವಧಿಯಲ್ಲಿ 150.64ಮಿ.ಮೀ., 2011ರ ಇದೇ ಅವಧಿಯಲ್ಲಿ 247.30 ಮಿ.ಮೀ. ಮಳೆಯಾಗಿತ್ತು.

ಹವಾಮಾನ ತಜ್ಞರ ಪ್ರಕಾರ ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶ ಮಾಡುವ ನಿರೀಕ್ಷೆ ಇದೆ.
ಶನಿವಾರಸಂತೆಯಲ್ಲಿ ಮಳೆ

ಶನಿವಾರಸಂತೆ: ಪಟ್ಟಣ ಹಾಗೂ ಸುತ್ತಲಿನ ಮಾಲಂಬಿ ಬೆಟ್ಟದ ತಪ್ಪಲು, ಮಾಲಂಬಿ, ಮುಳ್ಳೂರು, ಬೆಳ್ಳಾರಳ್ಳಿ,  ಕೊಡ್ಲಿಪೇಟೆಯಲ್ಲಿ ಶುಕ್ರವಾರ ಉತ್ತಮ ಮಳೆ ಆಗಿದೆ.

ಗುರುವಾರ ರಾತ್ರಿಯೂ ಉತ್ತಮ ಮಳೆ ಸುರಿದಿತ್ತು. ನಿತ್ಯ ಅಲ್ಪ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಜಿಲ್ಲೆಯಲ್ಲಿ ಭಾರಿ ಮಳೆ ಸಾಧ್ಯತೆ
ಮಡಿಕೇರಿ: ಈ ವಾರದ ಮುನ್ಸೂಚನೆ ಪ್ರಕಾರ ಜೂನ್ 1ರಿಂದ ಜೂನ್ 4ರ ವರೆಗೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು, ಮಿಂಚು ಸಹಿತ ಸಾಧಾರಣದಿಂದ ಭಾರಿ ಮಳೆ ಬರುವ ಸಾಧ್ಯತೆಗಳಿವೆ. ಗರಿಷ್ಠ ಉಷ್ಣಾಂಶ 24-15 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 16-17 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುವ ಸಾಧ್ಯತೆಗಳಿವೆ. ಗಾಳಿಯು ಗಂಟೆಗೆ ಸರಾಸರಿ 5ರಿಂದ 6 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT