ನಾಪೋಕ್ಲು: ಜಾತಿ, ಧರ್ಮ, ಪಂಗಡ, ಜನಾಂಗದವರಿಗೆ ತೊಂದರೆ ಮಾಡದೇ ಇರುವವನು ನಿಜವಾದ ಮುಸ್ಲಿಂ ಆಗಿರುತ್ತಾನೆ. ಜಾತಿ, ಭೇದ ಭಾವ ವಿಲ್ಲದೆ ಎಲ್ಲ ಸಮುದಾಯದವರು ಒಂದೇ ಎಂಬ ತತ್ವವನ್ನು ಅನುಸರಿಸಿ ಕೊಂಡರೆ ಶಾಂತಿ ನೆಲೆಸುತ್ತದೆ ಎಂದು ಖತೀಬರಾದ ಅಬ್ದುಲ್ ರೆಹಮಾನ್ ಸಖಾಫಿ ಹೇಳಿದರು.

ಹಾಕತ್ತೂರು ಬದ್ರ್ ಜಮಾ ಅತ್ನ ಸ್ವಲಾತ್ ವಾರ್ಷಿಕೋತ್ಸವ ಅಂಗವಾಗಿ ಹಾಕತ್ತೂರು ತೊಂಭತ್ತುಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸಂಜೆ ನಡೆದ ಸೌರ್ಹಾದ ಸಮ್ಮೇಳನ ಹಾಗೂ ಮತಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯ ಸಾಬುತಿಮ್ಮಯ್ಯ ಮಾತನಾಡಿ, ಎಲ್ಲ ಧರ್ಮ ಗ್ರಂಥಗಳು ಒಂದೇ ಅಂಶ ಒಳಗೊಂಡಿರುತ್ತದೆ. ಎಲ್ಲರೂ ಒಂದೇ ಎನ್ನುವ ಭಾವನೆ ಪ್ರತಿಯೊಬ್ಬರ ಮನದಲ್ಲಿ ಮೂಡಿದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪಳಂಗಪ್ಪ, ಹಾಕತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಪಿ.ಪಿ. ಸುಕುಮಾರ್, ಲೀಲಾಧರ್, ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ಪಿ.ಈ. ದಿವಾಕರ್ ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಮೊಯಿದು ಕುಂಞ ಹಾಜಿ ವಹಿಸಿದರು. ಸಮಾರಂಭದ ವೇದಿಕೆಯಲ್ಲಿ ಹಾಕತ್ತೂರು ಗ್ರಾಮ ಪಂಚಾಯಿತಿ ಸದಸ್ಯೆ ರತ್ನ, ತೊಂಭತ್ತುಮನೆ ಸ.ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಖಾಸಿಂ, ಮದ್ರಸ ಮುಖ್ಯ ಶಿಕ್ಷಕ ಜಲೀಲ್ ಸಖಾಫಿ, ಹಂಸ ಶಾಹಜಿ, ಅಸ್ರಫ್ ಹಾಜಿ, ಆಲಿ ಉಸ್ತಾದ್ ಉಪಸ್ಥಿತರಿದ್ದರು.

ತೊಂಭತ್ತುಮನೆಯ ಅಲ್ತಾಫ್ ಸ್ವಾಗತಿಸಿ, ಅಬೂಬಕ್ಕರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಳಿಕ ಬಹು ಜ. ಸಯ್ಯದ್ ಸುಹೈಲ್ ಅಸ್ಸಖಾಫ್ ಕಣ್ಣೂರು ನೇತೃತ್ವದಲ್ಲಿ ಮತಪ್ರವಚನ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.