ಮಡಿಕೇರಿ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಮಹದೇವ ಪೇಟೆ ರಸ್ತೆಯನ್ನು ವಿಸ್ತರಿಸಲು ಹಾಗೂ ಕಾಂಕ್ರಿಟ್ ರಸ್ತೆಯನ್ನಾಗಿ ರೂಪಿಸಲು ನಗರಸಭೆಯು ರೂ.2.51 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಿದೆ.
ಪ್ರಾಥಮಿಕ ಹಂತದ ಸರ್ವೆ ಕಾರ್ಯ ಮುಗಿದಿದ್ದು, ಸದ್ಯದಲ್ಲಿಯೇ ಕಾಮಗಾರಿಗೆ ಚಾಲನೆ ದೊರೆಯಲಿದೆ.
ಇಲ್ಲಿನ ಹೃದಯ ಭಾಗವಾಗಿರುವ ಮಹದೇವಪೇಟೆ ಬಡಾವಣೆಯ ಎ.ವಿ. ಶಾಲೆಯಿಂದ ಇಂದಿರಾ ಗಾಂಧಿ ವೃತ್ತದವರೆಗೂ ಅಪಾರ ವ್ಯಾಪಾರ ವಹಿವಾಟು ನಡೆಯುವ ಹಿನ್ನೆಲೆಯಲ್ಲಿ ಯಾವಾಗಲೂ ಜನಸಂದಣಿ ಹೆಚ್ಚಿ ರುತ್ತದೆ. ಆದರೆ ರಸ್ತೆ ಕಿರಿದಾಗಿರುವುದರಿಂದ ಸಾರ್ವಜನಿಕರು ದಿನನಿತ್ಯ ಕಿರಿಕಿರಿ ಅನುಭವಿಸುವುದನ್ನು ತಪ್ಪಿಸಲು ನಗರಸಭೆ ಮುಂದಾಗಿದೆ.
ಮುಖ್ಯಮಂತ್ರಿ ಅವರ ನಗರೋತ್ಥಾನ 2ನೇ ಹಂತ ಅನುದಾನ ರೂ.2.51 ಕೋಟಿ ವೆಚ್ಚದಲ್ಲಿ 12 ಅಡಿ ಅಗಲದ 910ಮೀಟರ್ ಉದ್ದದ ಕಾಂಕ್ರಿಟ್ ರಸ್ತೆಯ ಕಾಮಗಾರಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
ಮಾರುಕಟ್ಟೆ ದಿನವಾದ ಶುಕ್ರವಾರ, ಹಿಂದೂ ಹಾಗೂ ಮುಸ್ಲಿಂ ಸಮಯದಾ ಯದ ಮಸೀದಿ, ದೇವಾಲಗಳು ಇರುವು ದರಿಂದ ಹಬ್ಬ ಹರಿದಿನಗಳಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಪ್ರತಿವರ್ಷ ನಡೆಯುವ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುವ ಕರಗ ಉತ್ಸವವು ಇದೇ ಮಾರ್ಗವಾಗಿ ಸಂಚರಿಸುವುದು ವಾಡಿಕೆಯಾಗಿದ್ದು, ಈ ರಸ್ತೆ ತನ್ನದೆ ಆದ ಮಹತ್ವ ಪಡೆದಿದೆ.
ರಸ್ತೆ ಕಿರಿದಾಗಿರುವ ಕಾರಣ ಸಂಚಾರದಲ್ಲಿ ವ್ಯತ್ಯಯ ಉಂಟಾಗದಂತೆ ಏಕಮುಖ ಸಂಚಾರವನ್ನು ಮಾಡಲಾ ಗಿದೆ. ಈ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವ್ಯಾಪಾರ ವಹಿವಾಟು ಹೆಚ್ಚಾಗ ತೊಡಗಿರುವ ಹಿನ್ನೆಲೆಯಲ್ಲಿ ದಿನವಿಡೀ ಸಾವಿರಾರು ಜನರು ಸಂಚರಿಸುತ್ತಾರೆ.
ಕಾಮಗಾರಿಯ ಜವಾಬ್ದಾರಿಯನ್ನು ಬೆಂಗಳೂರಿನ ಖಾಸಗಿ ಕಂಪೆನಿಯು ಪಡೆದುಕೊಂಡಿದೆ. ರಸ್ತೆಯ ಎರಡು ಭಾಗದಲ್ಲಿ ಚರಂಡಿ ನಿರ್ಮಾಣ ಮಾಡಿ, ವ್ಯವಸ್ಥಿತ ರೀತಿಯಲ್ಲಿ ಕಾಮಗಾರಿ ನಡೆಸುವ ಉದ್ದೇಶವನ್ನು ನಗರಸಭೆ ಹೊಂದಿದೆ.
ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಸ್ತೆಯ ಎರಡು ಬದಿಯಲ್ಲಿ ಕಟ್ಟಡಗಳನ್ನು ತೆರವುಗೊಳಿಸಬೇಕಿದೆ. ಇದಕ್ಕೆ ಕೆಲವು ಸ್ಥಳೀಯರು ಬೆಂಬಲ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.