ಶನಿವಾರ, ಆಗಸ್ಟ್ 17, 2019
27 °C

ಕೋಲಾರ: ನೆರೆ ಸಂತ್ರಸ್ತರಿಗೆ 10 ಸಾವಿರ ಚಪಾತಿ

Published:
Updated:
Prajavani

ಕೋಲಾರ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ 10 ಸಾವಿರ ಚಪಾತಿ ತಲುಪಿಸಲು ನಗರದ ವಿವಿಧ ಸಂಘಗಳ ಮಹಿಳಾ ಸದಸ್ಯರಿಂದ ಭಾನುವಾರ ಆರಂಭವಾಗಿದೆ.

ನಗರದ ಡೊದ್ದಪೇಟೆ ಕಲ್ಯಾಣ ಮಂಟಪದಲ್ಲಿ ಜಮಾಯಿಸಿದ ಮಹಿಳೆಯರು 400 ಕೆಜಿ ಗೋದಿ ಹಿಟ್ಟಿನಲ್ಲಿ 10 ಸಾವಿರ ತಯಾರಿಸಲಾಗುತ್ತಿದೆ.

ಸುಮಾರು 25ಕ್ಕೂ ಹೆಚ್ಚು ಮಹಿಳೆಯರು ಕನ್ಯಕಾ ಪರಮೇಶ್ವರಿ ದೇವಾಲಯದ ಬಳಿಯ ಛತ್ರದಲ್ಲಿ ಚಪಾತಿ ಸಿದ್ದಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸುಮಾರು 400 ಕೆಜಿ ಅಧಿಕ ಗೋದಿ ಹಿಟ್ಟನ್ನು ಚಪಾತಿ ಕಾರ್ಯಕ್ಕೆ ಬಳಸಲಾಗುತ್ತಿದೆ.

ಒಂದು ಕಡೆ ಚಪಾತಿ ಹಿಟ್ಟು ಕಲಿಸುತ್ತಿದ್ದ ಮಹಿಳೆಯರು, ಮತ್ತೊಂದು ಕಡೆ ಉಂಡೆ ಮಾಡಿ ಲಟ್ಟಿಸಿ ಕೊಡುವ ಕಾರ್ಯದಲ್ಲಿ ಇನ್ನೊಂದು ಕೈಗಳು ಸಹಾಯ ಮಾಡುತ್ತಿದ್ದವು. ಮಗದೊಂದು ಕಡೆ ಚಪಾತಿ ಕಾಯಿಸುವ ಕೆಲಸವನ್ನು ಇನ್ನೊಂದಷ್ಟು ಮಹಿಳೆಯರು ಹಂಚಿಕೊಂಡಿದ್ದರು.

ಕಾಯಿಸಿದ ಚಪಾತಿಯನ್ನು ಕೆಲ ಸಮಯ ಬಿಸಿ ಆರಲು ಬಿಟ್ಟು ನಂತರ ಉಪ್ಪಿನಕಾಯಿಯ ಪೊಟ್ಟಣದೊಂದಿಗೆ ಪ್ಯಾಕ್ ಮಾಡುವ ಕಾರ್ಯದಲ್ಲಿ ಪುರುಷರು ತೊಡಗಿದ್ದರು.

ಉತ್ತರ ಕರ್ನಾಟಕದದಲ್ಲಿ ನೆರೆಯಿಂದಾಗಿ ಸಂತ್ರಸ್ತರು ಸಂಕಷ್ಟದಲ್ಲಿದ್ದು, ಹಸಿವಿನಿಂದ ಸಂಕಷ್ಟಕ್ಕೀಡಾಗಬಾರದು ಎಂಬ ಉದ್ದೇಶದಿಂದ ನಮ್ಮ ಕೈಲಾದಷ್ಟು ಆಹಾರ ಸಿದ್ದಪಡಿಸಿ ಕಳುಹಿಸಲು ಮುಂದಾಗಿರುವುದಾಗಿ ಉಸ್ತುವಾರಿ ವಹಿಸಿದ್ದ ನಾಗರಾಜ್, ಎಸ್.ವಿ.ವಿಜಯಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಂಘ ಮತ್ತು ವಾಸವಿ ಮಹಿಳಾ ಮಂಡಳಿಯ ಸದಸ್ಯೆಯರಾದ ಅರುಣ, ಕವಿತ, ದೀಪಾ ನೇತೃತ್ವವಹಿಸಿದ್ದರು.

ವಿವಿಧ ಸಂಘಸಂಸ್ಥೆಗಳವರು ಸಹ ನೆರೆ ಸಂತ್ರಸ್ತರಗೆ ನೆರವು ನೀಡಲು ವಿವಿಧ ರೀತಿಯ ಸಮಾಗ್ರಿಗಳನ್ನು ಸಂಗ್ರಹಿಸಿ ಕಳುಹಿಸಿಕೊಟ್ಟರು.

Post Comments (+)