ಮಂಗಳವಾರ, ಮಾರ್ಚ್ 28, 2023
32 °C
ಗ್ರಾಮಸ್ಥರಿಂದ ಕೋಲಾಟ ನೃತ್ಯ ಪ್ರದರ್ಶನ

ಮುಳಬಾಗಿಲು: ಕನ್ನಸಂದ್ರದಲ್ಲಿ ಕಲಿಕಾ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ‘ವಿದ್ಯಾರ್ಥಿಗಳು ನಲಿಯುತ್ತಾ ಆಡುತ್ತಾ ಕಲಿಯಬೇಕೆ ಹೊರತು ಬಲತ್ಕಾರದಿಂದ ಓದಬಾರದು’ ಎಂದು ಪ್ರಗತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆ.ಎಂ. ಮುನೇಶ್ ಹೇಳಿದರು.

ತಾಲ್ಲೂಕಿನ ಕನ್ನಸಂದ್ರ ಗ್ರಾಮದಲ್ಲಿ ನಡೆದ ಎಮ್ಮೇನತ್ತ ಕ್ಲಸ್ಟರ್‌ ವ್ಯಾ‍ಪ್ತಿಯ ಮಕ್ಕಳ ಕಲಿಕಾ ಹಬ್ಬದಲ್ಲಿ ಅವರು ಮಾತನಾಡಿದರು.

ಶಿಕ್ಷಣವನ್ನು ವಿದ್ಯಾರ್ಥಿಗಳು ಸಂತೋಷದಿಂದ ತೃಪ್ತಿಪಟ್ಟು ಕಲಿತಾಗ ಶಾಶ್ವತವಾಗಿ ಉಳಿಯುತ್ತದೆ. ಗಂಟೆಗಳ ಕಾಲ ಕೂತು ಕಷ್ಟಪಟ್ಟು ಓದುವ ಶಿಕ್ಷಣ ತಾತ್ಕಾಲಿಕವಾಗಿ ಮೆದುಳಿನಲ್ಲಿ ಸಂಗ್ರಹವಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ಕಲಿಕಾ ಹಬ್ಬದಲ್ಲಿ ವಿದ್ಯಾರ್ಥಿಗಳು ನಾನಾ ವೇಷಭೂಷಣ ತೊಟ್ಟು ನಲಿದಾಡಿದರು. ಮಕ್ಕಳ ಆಟಪಾಠ ನೋಡಿದ ಶಿಕ್ಷಕರು ಹಾಗೂ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಸ್ಥಳೀಯ ಮುಖಂಡರು ವಿದ್ಯಾರ್ಥಿಗಳ ಜೊತೆಯಲ್ಲಿ ಕೋಲಾಟ, ಹುಲಿವೇಷ, ಕಾಂತಾರ ವೇಷ ಹಾಕಿ ನಲಿದಾಡಿದರು.

ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸೋಮೇಶ್, ಎಮ್ಮೆನತ್ತ ಅಭಿವೃದ್ಧಿ ಅಧಿಕಾರಿ ಸುಧಾಕರ್, ಉಪಾಧ್ಯಕ್ಷ ಹನುಮಪ್ಪ, ನಿವೃತ್ತ ಶಿಕ್ಷಕರಾದ ಕೆ. ಲಕ್ಷ್ಮೀನಾರಾಯಣ, ರಾಧಾಕೃಷ್ಣ, ವಿಶ್ವನಾಥ ರೆಡ್ಡಿ, ಶಾಮಣ್ಣ, ಕರಡಗೂರು ಗ್ರಾಮದ ವೆಂಕಟೇಶಪ್ಪ, ಶಿಕ್ಷಕರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.