ಕೋಲಾರ: ಭಗ್ನ ಪ್ರೇಮಿಯು ತನ್ನ ಪ್ರೇಯಸಿಯನ್ನು ನಗರದ ಎಂ.ಬಿ ರಸ್ತೆಯಲ್ಲಿ ಗುರುವಾರ ಹಾಡಹಗಲೇ ಸಿನಿಮೀಯವಾಗಿ ಅಪಹರಿಸಿದ್ದು, ಘಟನಾವಳಿಯ ದೃಶ್ಯ ಸಮೀಪದ ಎಲೆಕ್ಟ್ರಾನಿಕ್ಸ್ ಮಳಿಗೆಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಗರದ ದೇವಾಂಗಪೇಟೆಯ ಯುವಕ ಶಿವು (23) ಎಂಬಾತ ಸ್ನೇಹಿತನ ಜತೆ ಸೇರಿ ಈ ಕೃತ್ಯ ಎಸಗಿದ್ದು, ಘಟನಾವಳಿಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಿವು ಮತ್ತು ದೇವಾಂಗಪೇಟೆಯ ಯುವತಿ ಹಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಈ ವಿಷಯ ತಿಳಿದ ಯುವತಿ ಪೋಷಕರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಶಿವು ಸಂಚು ರೂಪಿಸಿ ತನ್ನ ಪ್ರೇಯಸಿಯನ್ನು ಅಪಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯು ತಂಗಿಯ ಜತೆ ಎಂ.ಬಿ ರಸ್ತೆಯಲ್ಲಿ ಮಧ್ಯಾಹ್ನ ನಡೆದು ಹೋಗುತ್ತಿದ್ದರು. ಅದೇ ವೇಳೆಗೆ ಎದುರುಗಡೆಯಿಂದ ಸ್ನೇಹಿತನ ಜತೆ ಕಾರಿನಲ್ಲಿ ಬಂದ ಶಿವು ವಾಹನದಿಂದ ಕೆಳಗಿಳಿದು ಏಕಾಏಕಿ ಯುವತಿಯನ್ನು ಗೊಂಬೆಯಂತೆ ಎತ್ತಿ ವಾಹನದೊಳಗೆ ತಳ್ಳಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಶಿವು ಯುವತಿಯನ್ನು ಮದುವೆಯಾಗಲು ಪೋಷಕರ ಒಪ್ಪಿಗೆ ಕೇಳಿದ್ದ. ಆದರೆ, ಯುವತಿ ಪೋಷಕರು ನಿರಾಕರಿಸಿದ್ದರು. ಇದರಿಂದ ಕೋಪಗೊಂಡಿದ್ದ ಶಿವು ಯುವತಿ ಜತೆ ಸೇರಿ ಅಪಹರಣದ ನಾಟಕವಾಡಿರುವ ಸಾಧ್ಯತೆಯಿದೆ. ಪ್ರಕರಣದಲ್ಲಿ ಯುವತಿಯೂ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಯುವತಿಯು ಪ್ರತಿ ಗುರುವಾರ ಸಂಜೆ ದೇವಾಲಯಕ್ಕೆ ಹೋಗುತ್ತಿದ್ದರು. ಆದರೆ, ಗುರುವಾರ ಸಂಜೆ ಬೇರೆ ಕೆಲಸವಿರುವುದಾಗಿ ಪೋಷಕರಿಗೆ ಹೇಳಿದ ಯುವತಿಯು ತಂಗಿಯ ಜತೆ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಅಪಹರಣದ ಘಟನೆ ನಡೆದಿದೆ. ಯುವತಿಯೇ ಆರೋಪಿ ಶಿವುಗೆ ದೇವಸ್ಥಾನಕ್ಕೆ ಹೋಗುತ್ತಿರುವ ಸಂಗತಿ ತಿಳಿಸಿರುವ ಶಂಕೆಯಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾಹಿತಿ ಸಿಕ್ಕಿದೆ: ‘ಅಪಹರಣ ಸಂಬಂಧ ಯುವತಿಯ ತಂಗಿ ದೂರು ನೀಡಿದ್ದು, ಗಲ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಶಿವುನ ಮೊಬೈಲ್ ಕರೆಗಳ ವಿವರ ಆಧರಿಸಿ ನಡೆಸಿದ ತನಿಖೆಯಿಂದ ಆತನಿರುವ ಸ್ಥಳದ ಮಾಹಿತಿ ಸಿಕ್ಕಿದೆ. ಶುಕ್ರವಾರ (ಆ.14) ಬೆಳಿಗ್ಗೆ ವೇಳೆಗೆ ಆರೋಪಿ ಮತ್ತು ಯುವತಿಯನ್ನು ಪತ್ತೆ ಮಾಡುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.