ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರಿನಲ್ಲಿ ಅಪಘಾತ: ಮಕ್ಕಳು ಸೇರಿ 15 ಮಂದಿಗೆ ಗಾಯ

Published 9 ಜೂನ್ 2024, 19:48 IST
Last Updated 9 ಜೂನ್ 2024, 19:48 IST
ಅಕ್ಷರ ಗಾತ್ರ

ಮಾಲೂರು: ಸೀತನಾಯಕನಹಳ್ಳಿ ಗ್ರಾಮದ ಬಳಿ ಭಾನುವಾರ ಟೆಂಪೊ ಟ್ರಾವೆಲರ್ (ಟಿ.ಟಿ) ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರಿನ ನಾಗವಾರದ ಮಂಜುನಾಥ್ ತಮ್ಮ ಸಂಬಂಧಿಕರೊಂದಿಗೆ ತಾಲ್ಲೂಕಿನ ಮಿಣಸಂದ್ರ ಗ್ರಾಮಕ್ಕೆ ಸೀಮಂತ ಕಾರ್ಯಕ್ರಮಕ್ಕೆ ಟಿ.ಟಿಯಲ್ಲಿ ಬಂದಿದ್ದರು.

ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಹಿಂದಿರುಗುವಾಗ ಸೀತನಾಯಕನಹಳ್ಳಿ ಗೇಟ್ ಬಳಿ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. 

ಟಿ.ಟಿಯಲ್ಲಿದ್ದ ಮಮತಾ, ಗೌರಮ್ಮ, ರಾಧಮ್ಮ, ಯಶೋದಮ್ಮ, ಚಾಲಕ ಮಹಮ್ಮದ್ ಆಸಿಫ್ ಹಾಗೂ ಸಿಂಧೂ ಹಾಗೂ ಚಂದನ್ ಎಂಬ ಮಕ್ಕಳಿಗೆ ಗಾಯಗಳಾಗಿವೆ. ಕಾರಿನಲ್ಲಿದ್ದ ಮಿಣಸಂದ್ರ ಗ್ರಾಮದ ಲಕ್ಷ್ಮಮ್ಮ ಹಾಗೂ ವೆಂಕಟೇಶ್ ದಂಪತಿಗೆ ಗಾಯಗಳಾಗಿವೆ. ಉಳಿದವರ ಕೈ,ಕಾಲಿಗೆ ಗಾಯಗಳಾಗಿವೆ.

ಮಾಲೂರಿನ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಪಘಾತದಲ್ಲಿ ಗಾಯಗೊಂಡ ವಾಹನ ಚಾಲಕನನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದರು
ಅಪಘಾತದಲ್ಲಿ ಗಾಯಗೊಂಡ ವಾಹನ ಚಾಲಕನನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT