ಭಾನುವಾರ, ಮೇ 16, 2021
22 °C

ಕೆಜಿಎಫ್‌: ಅಪಘಾತದಲ್ಲಿ ಜಿಂಕೆ ಸಾವು.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ನಗರದಲ್ಲಿ ಮಂಗಳವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಂದು ಜಿಂಕೆ ಮೃತಪಟ್ಟು, ಮತ್ತೊಂದು ಜಿಂಕೆ ಗಾಯಗೊಂಡಿದೆ.

ಮಾರಿಕುಪ್ಪಂ ಬಳಿಯ ಕೊಡಿಗೇನಹಳ್ಳಿ ಬಳಿ ರಾತ್ರಿ ಬೈಕ್‌ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದ ನಾರಾಯಣಸ್ವಾಮಿ ಎಂಬಾತ ದಾರಿಗೆ ಅಡ್ಡ ಬಂದ ಜಿಂಕೆಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ಜಿಂಕೆ ಸ್ಥಳದಲ್ಲಿಯೇ ಮೃತಪಟ್ಟಿದೆ. ಮಾರಿಕುಪ್ಪಂ ಪೊಲೀಸರು ಆರೋಪಿ ನಾರಾಯಣಸ್ವಾಮಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕೋರಮಂಡಲ್‌ನ ಡಾ.ಅಂಬೇಡ್ಕರ್ ಶಾಲೆಯ ಬಳಿ ಅಪಘಾತಕ್ಕೆ ಒಳಗಾದ ಗಂಡು ಜಿಂಕೆ ಶಾಲೆಯ ಹೊರವಲಯದಲ್ಲಿ ನರಳುತ್ತಾ ಬಿದ್ದಿತ್ತು. ಅದನ್ನು ಗಮನಿಸಿದ ನಿವಾಸಿಗಳು ಬೆಮಲ್ ನಗರದ ಸ್ನೇಕ್ ರಾಜ ಅವರನ್ನು ಕರೆಸಿಕೊಂಡರು. ನಂತರ ಗಾಯಗೊಂಡ ಜಿಂಕೆಗೆ ರಾಬರ್ಟಸನ್‌ಪೇಟೆಯ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಜಿಂಕೆಯನ್ನು ಕರೆದೊಯ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು