ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಅರಿವು ಭಾರತ ಕೇಂದ್ರದಿಂದ ‘ನಮ್ಮ ನಡೆ ಅಸ್ಪೃಶ್ಯ ಮುಕ್ತ ಭಾರತದೆಡೆಗೆ’ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಗಂಗಾಧರ್ ಅವರ ನಿವಾಸದಲ್ಲಿ ಸಮಾನತೆಗಾಗಿ ಸಹಭೋಜನ ವ್ಯವಸ್ಥೆ ಮಾಡಲಾಗಿತ್ತು. ದಲಿತರು, ಮುಸ್ಲಿಮರು ಸೇರಿದಂತೆ ಸರ್ವ ಜಾತಿಯ ಜನರ ಜೊತೆ ಸಹಭೋಜನ ನಡೆಯಿತು. ರಾಯಲ್ಪಾಡು ಬಸ್ ನಿಲ್ದಾಣದಿಂದ ಶಾಲಾ ಆವರಣದವರೆಗೆ ನಡಿಗೆ ಆಯೋಜಿಸಲಾಗಿತ್ತು. ಹೊಸ ವರ್ಷದ ಮುನ್ನೋಟದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ಏರ್ಪಡಿಸಲಾಗಿತ್ತು. ತಮಟೆ ಸೇರಿದಂತೆ ಕಲಾ ಪ್ರದರ್ಶನವಿತ್ತು. ಗಂಗಾಧರ್ ಅವರಿಗೆ ‘ಗ್ರಾಮ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ‘ಎಲ್ಲರಿಗೂ ಶಿಕ್ಷಣ ಸಿಗುತ್ತಿದೆ, ಆದರೆ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ, ಯುವಜನತೆ ದಾರಿ ತಪ್ಪುತ್ತಿದ್ದು ಪೋಷಕರು, ಹುಟ್ಟಿದ ಊರು ಹಾಗೂ ದೇಶದ ಮೇಲೆ ಗೌರವ ಇಲ್ಲದಂತಾಗುತ್ತಿದೆ. ವಿದ್ಯಾವಂತರಿಂದ ವಿದೇಶಿ ಪಲಾಯನ ನಡೆಯುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಎಷ್ಟೇ ವಿದ್ಯಾವಂತರಾದರೂ, ಎಷ್ಟೇ ಮೇಲೆ ಏರಿದರೂ ಸಂಸ್ಕಾರ ಕಳೆದುಕೊಳ್ಳಬಾರದು. ಪೋಷಕರಿಗೆ, ಹುಟ್ಟಿದ ಊರಿನ ಮೇಲೆ ಗೌರವ ಇಟ್ಟುಕೊಳ್ಳಬೇಕು. ಮತ್ತೊಬ್ಬರ ಬಗ್ಗೆ ಪ್ರೀತಿ ತೋರುತ್ತಾ ಸಹ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಹಳ್ಳಿಗಳು ಸೇರಿದಂತೆ ಹಲವೆಡೆ ಮೌಢ್ಯವಿದೆ. ಹೀಗಾಗಿ, ಅಸ್ಪೃಶ್ಯತೆ ಉಳಿದುಕೊಂಡಿದೆ. ವಿದ್ಯಾರ್ಥಿಗಳು ಮೌಢ್ಯ ಪ್ರಶ್ನೆ ಮಾಡಬೇಕು. ಅರಿವು ಕೇಂದ್ರವು ಸಮಾಜದಲ್ಲಿನ ಅಸ್ಪೃಶ್ಯತೆ ಹೋಗಲಾಡಿಸುವ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದರು.

ಇದೇ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚೆ ಮಾಡಿ, ಸಮಾಜದಲ್ಲಿನ ಅಸ್ಪೃಶ್ಯತೆ ಹೋಗಲಾಡಿಸಲು ಎಲ್ಲರೂ ಕ್ರಮಕೈಗೊಳ್ಳಬೇಕು ಎಂದು ಕರೆ ನೀಡಿದರು.

ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ‘ಹಳ್ಳಿಗಳಲ್ಲಿ ನಿಧಾನವಾಗಿ ಬದಲಾವಣೆ ಕಾಣಿಸಿಕೊಳ್ಳುತ್ತಿದೆ. ಇದು ಎಲ್ಲಾ ಕಡೆ ಕಾಣುವಂತಾಗಬೇಕು. ಶಿಕ್ಷಣ ಬೆಳಕು ತರಬೇಕು, ಆಲೋಚನೆ ವಿಸ್ತರಿಸಬೇಕು. ವಿದ್ಯಾರ್ಥಿದೆಸೆಯಿಂದಲೇ ಇದು ಆರಂಭವಾಗಬೇಕು’ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ತಾ.ಪಂ ಇಒ ಕೆ.ಸರ್ವೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬೈರೇಗೌಡ, ಪ್ರಧಾನ ಕಾರ್ಯದರ್ಶಿ ಆರ್.ಕಾಳಚಾರಿ, ಭೀಮಸೇನೆ ರಾಜ್ಯಾಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಮುಖಂಡ ಟಿ.ವಿಜಯಕುಮಾರ್, ಪಿಡಿಒ ನರೇಂದ್ರಬಾಬು, ಪಿಎಸ್ಐ ರಾಮು, ಇಸಿಒ ಕೆ.ಸಿ.ಶ್ರೀನಿವಾಸ್, ಪ್ರಾಂಶುಪಾಲ ಪಿ.ಗಣೇಶ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಶೈಲ, ಎಸ್ಡಿಎಂಸಿ ಅಧ್ಯಕ್ಷ ರೆಡ್ಡಪ್ಪ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಟಿ.ಆಂಜಪ್ಪ, ಅರಿವು ಕೇಂದ್ರದ ಅರಿವು ಶಿವಪ್ಪ, ಓಂಪ್ರಕಾಶ್, ಕೋಲಾರ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀನಿವಾಸಗೌಡ, ಉಪನ್ಯಾಸಕ ಎಂ.ಜಿ.ಗಿರೀಶ್, ವಾರಧಿ ಶಾಲಾ ಅಧ್ಯಕ್ಷ ಮಂಜುನಾಥರೆಡ್ಡಿ ಹಾಗೂ ಶಾಲಾ ಮಕ್ಕಳು ಇದ್ದರು.

ಅರಿವು ಕೇಂದ್ರದ ಸಂಸ್ಥಾಪಕ ಅರಿವು ಶಿವಪ್ಪ ಅವರು ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿರುವುದು ಶ್ಲಾಘನೀಯ
ಎಂ.ಆರ್.ರವಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.