ಸೋಮವಾರ, ಫೆಬ್ರವರಿ 17, 2020
27 °C
ಕಡಗಟ್ಟೂರು ಎಸ್‌ಎಫ್‌ಎಸಿಎಸ್‌ಗೆ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

ಸಂಘದ ಕಾರ್ಯ ಚಟುವಟಿಕೆಗೆ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಕಚೇರಿಗೆ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ, ಕಾರ್ಯ ಚಟುವಟಿಕೆ ಪರಿಶೀಲಿಸಿದರು.

ಸಂಘದ ವ್ಯಾಪ್ತಿಯ ಜೀಚಗಂಡಹಳ್ಳಿ ಮುನಿಯಪ್ಪ ರೇಷ್ಮೆ ಹುಳ ಮನೆಗೆ ಹಾಗೂ ಮಹಿಳಾ ಸ್ವ ಸಹಾಯಗಳ ಸಂಘಗಳ ಪ್ರತಿನಿಧಿಗಳನ್ನು ಭೇಟಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಮಹಿಳಾ ಸ್ವ ಸಹಾಯ ಸಂಘಗಳ ನಿರ್ವಹಣೆ, ಸಾಲ ಮರುಪಾವತಿ, ಠೇವಣಿ ಹೂಡಿಕೆ, ಬೆಳೆ ಸಾಲ ಮರುಪಾವತಿ, ಹಣಕಾಸು ವ್ಯವಹಾರದ ಬಗ್ಗೆ ಸಂಘಗಳ ಪ್ರತಿನಿಧಿಗಳು ವಿವರಿಸಿದರು.

‘ಸಂಘದ ಮೂಲಕ ಪಡೆದುಕೊಂಡಿರುವ ಸಾಲವನ್ನು ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತೆವೆ. ಹಸು ಖರೀದಿಸಿ ಹಾಲು ಉತ್ಪಾದಿಸಿ ಡೇರಿಗೆ ಸರಬರಾಜು ಮಾಡುತ್ತೆವೆ, ಇದರಿಂದ ಆರ್ಥಿಕವಾಗಿ ಲಾಭ ದೊರೆಯುತ್ತಿದ್ದು, ಪಡೆದುಕೊಂಡಿರುವ ಸಾಲವನ್ನು ಕಂತಿನ ಮೂಲಕ ಮರುಪಾವತಿ ಮಾಡಲು ಸಹಕಾರಿಯಾಗುತ್ತದೆ’ ಎಂದು ಸಂಘಗಳ ಪ್ರತಿನಿಧಿಗಳು ತಿಳಿಸಿದರು.

ನಬಾರ್ಡ್ ಬ್ಯಾಂಕಿನ ಡಿಜಿಎಂ ನಂಬೂದರಿ ಮಾತನಾಡಿ, ‘ಸಹಕಾರ ಸಂಘಗಳು ಡಿಸಿಸಿ ಬ್ಯಾಂಕಿನ ಅವಿಭಾಜ್ಯ ಅಂಗ ಇದ್ದಂತೆ. ಸಂಘಗಳು ಉತ್ತಮ ರೀತಿಯಲ್ಲಿ ಆರ್ಥಿಕ ಚಟುವಟಿಕೆ ನಡೆಸಿದಾಗ ಬ್ಯಾಂಕ್‌ ಲಾಭಗಳಿಸಲು ಸಹಕಾರಿಯಾಗುತ್ತದೆ. ರೈತರಲ್ಲಿ, ಮಹಿಳೆಯರ ಬಳಿ ಇರುವ ಉಳಿತಾಯ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಬ್ಯಾಂಕ್ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.

‘ಹಣಕಾಸು ಶೈಕ್ಷಣಿಕ ವರ್ಷ ಮಾರ್ಚ್‌ ಅಗಿರುವುದರಿಂದ ಪಡೆದುಕೊಂಡಿರುವ ಸಾಲ ಕಂತನ್ನು ಸಮರ್ಪಕವಾಗಿ ಪಾವತಿ ಮಾಡಬೇಕು. ಒಂದು ವೇಳೆ ಪಾವತಿ ಮಾಡದಿದ್ದರೆ ಆ ಫಲಾನುಭವಿಯೂ ಸುಸ್ತಿಯಾಗುವ ಅವಕಾಶ ಇರುತ್ತದೆ. ಇದರಿಂದ ನೀವು ಮತ್ತೆ ಸಾಲ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಎಚ್ಚರಿಸಿದರು.

ಅಪೆಕ್ಸ್ ಬ್ಯಾಂಕಿನ ಡಿಜಿಎಂ ಮಂಗಳಾ ನಾಯಕ್ ಮಾತನಾಡಿ, ‘ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಉತ್ತಮ ಸಾಧನೆ ಮಾಡುತ್ತಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಹೆಸರು ಪಡೆದುಕೊಂಡಿದ್ದು, ಬಡ ಮಹಿಳೆಯರ, ರೈತರ ಸಬಲಿಕರಣಕ್ಕೆ ಶ್ರಮಿಸುತ್ತಿದ್ದು, ನಂಬಿಕೆ ಉಳಿಸಿಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.

ಅಪೆಕ್ಸ್ ಎಜಿಎಂ ಡಿ.ಖಾನ್, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಖಲೀಂವುಲ್ಲಾ, ನಾಗೇಶ್, ಬಾಲಾಜಿ, ಸೂಪರ್‌ವೈಜರ್ ಅಮೀನ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು