ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿಗಳ ವ್ಯಾಪ್ತಿಯಲ್ಲಿರುವ ಗಡಿ ಭಾಗದ ಗ್ರಾಮಗಳಲ್ಲಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ರಾಗಿ, ಭತ್ತ, ತೆಂಗು, ಬಾಳೆ, ಟೊಮೆಟೊ, ಮುಸುಕಿನ ಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದರು. ಈ ಬೆಳೆಗಳ ಫಸಲು ಇನ್ನೇನು ಕೈಗೆ ಬಂದು ಮಾರಾಟ ಮಾಡಿ, ಕೈತುಂಬಾ ಹಣ ಗಳಿಸಬಹುದು ಎಂಬ ಆಕಾಂಕ್ಷೆಯನ್ನು ರೈತರು ಹೊಂದಿದ್ದರು.

ಆದರೆ, ಅದೊಂದು ರಾತ್ರಿ ಕಾಡಿನಿಂದ ಲಗ್ಗೆ ಇಟ್ಟ ಕಾಡಾನೆಗಳು ರೈತರ ಹೊಲ ಗದ್ದೆಗಳಿಗೆ ಲಗ್ಗೆ ಇಟ್ಟಿದ್ದವು. ಇದರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆಯಲಾಗಿದ್ದ ರಾಗಿ, ಭತ್ತ, ತೆಂಗು, ಬಾಳೆ, ಟೊಮೆಟೊ ಸೇರಿದಂತೆ ಇನ್ನಿತರ ಬೆಳೆಗಳು ಕಾಡಾನೆಗಳ ದಾಳಿಗೆ ಬಲಿಯಾಗಿವೆ. ಇದರಿಂದಾಗಿ ಕೈಗೆ ಬಂದಿದ್ದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿತ್ತು ಗಡಿ ಭಾಗದ ರೈತರ ಪರಿಸ್ಥಿತಿ.

ಈ ಹಿನ್ನೆಲೆಯಲ್ಲಿ ಬೆಳೆ ನಷ್ಟವಾದ ರೈತರಿಗೆ ಸರ್ಕಾರವು ಬೆಳೆನಷ್ಟ ಪರಿಹಾರ ನೀಡಲು ಬೆಳೆ ಸಮೀಕ್ಷೆ ನಡೆಸಲಾಗಿತ್ತು. ಆದರೆ, ಇದುವರೆಗೆ ಸರ್ಕಾರದಿಂದ ತಮ್ಮ ಕೈ ಸೇರಬೇಕಿದ್ದ ಬೆಳೆನಷ್ಟ ಪರಿಹಾರ ಮಾತ್ರ ಲಭ್ಯವಾಗದ ಕಾರಣ, ರೈತರು ಕಂಗಾಲಾಗಿದ್ದಾರೆ. ಜೊತೆಗೆ ಹಣಕಾಸು ಇಲಾಖೆ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ.

ಅರಣ್ಯ ಇಲಾಖೆ ನೀಡುವ ಬೆಳೆ ನಷ್ಟ ಪರಿಹಾರಕ್ಕಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ, ಪರಿಶೀಲನೆ ಮಾಡಿಕೊಂಡು ಹೋಗಿದ್ದರು. ಆದರೆ, ಈ ಎಲ್ಲ ಪ್ರಕ್ರಿಯೆಗಳು ಮುಗಿದು ಒಂದು ವರ್ಷ ಕಳೆದರೂ, ಬೆಳೆ ಕಳೆದುಕೊಂಡ ಸಂತ್ರಸ್ತ ರೈತರ ಬ್ಯಾಂಕ್ ಖಾತೆಗೆ ನಯಾ ಪೈಸೆಯೂ ಜಮೆ ಆಗಿಲ್ಲ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂಬ ಸಿದ್ಧ ಉತ್ತರ ನೀಡುತ್ತಾರೆ ಎಂದು ರೈತರು ಅಳಲು ತೋಡಿಕೊಂಡರು.

ಜಮೀನಿನ ಉಳುಮೆ, ದಿಂಡು ಹೊಡೆಯಲು, ಮಂಚಿಂಗ್ ಪೇಪರ್ ಹಾಕಲು, ಗೊಬ್ಬರ, ಕೃಷಿ ಕಾರ್ಮಿಕರಿಗೆ ಕೂಲಿ ಮತ್ತು ಕೀಟನಾಶಕ ಔಷಧಿಗಳಿಗಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡಿ, ಬೆಳೆ ಬೆಳೆದಿದ್ದೆವು. ಇನ್ನೇನು ಬೆಳೆಗಳನ್ನು ಕಟಾವು ಮಾಡಬೇಕು ಎನ್ನುವ ಸಮಯದಲ್ಲಿ ಆನೆಗಳು ದಾಳಿ ಮಾಡಿ, ಬೆಳೆಗಳು ನಾಶವಾಗಿವೆ. ಆದರೆ, ಸರ್ಕಾರದಿಂದ ಇದುವರೆಗೆ ಬಿಡಿಗಾಸು ಸಿಕ್ಕಿಲ್ಲ. ಇದರಿಂದಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಧೋರಣೆಯು ರೈತ ವಿರೋಧಿಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸಾಲ ಮಾಡಿ ಸಾವಿರಾರು ರೂಪಾಯಿ ಬಂಡವಾಳ ಹಾಕಿ ಕಷ್ಟಪಟ್ಟು ನೀರು ಹಾಯಿಸಿ ಬೆಳೆಯಲಾಗಿದ್ದ ಬೆಳೆಯು ರಾತ್ರೋರಾತ್ರಿ ಆನೆ ದಾಳಿಯಿಂದ ನಾಶವಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗದೆ ಇರುವುದರಿಂದ ಸಂತ್ರಸ್ತ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಯುವ ರೈತ ಚತ್ತಗುಟ್ಲಹಳ್ಳಿ ಕಾಶಿನಾಥ್ ರಾವ್ ತಿಳಿಸಿದರು.

ಆನೆಗಳ ದಾಳಿಯ ಶಾಶ್ವತ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ನಾರಾಯಣಗೌಡ ಒತ್ತಾಯಿಸಿದರು.

ಕಾಡಾನೆ ದಾಳಿ ತಡೆಗೆ ಪರಿಹಾರವಾಗದ ಬೇಲಿ

ಕಾಡಾನೆಗಳು ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳಿಗೆ ಅಗತ್ಯವಿರುವ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಡುವುದಿಲ್ಲ. ಇದರಿಂದಾಗಿ ಕಾಡಾನೆಗಳು ಮತ್ತು ಇತರ ಕಾಡು ಪ್ರಾಣಿಗಳು ಆಹಾರ ಮತ್ತು ನೀರು ಅರಸಿಕೊಂಡು ಕಾಡಂಚಿನ ಹೊಲ ಗದ್ದೆಗಳಿಗೆ ಬಂದು ರೈತರು ಬೆಳೆದ ಬೆಳೆಗಳನ್ನು ನಾಶ ಮಾಡಿ ಮತ್ತೆ ಕಾಡಿಗೆ ಮರಳುತ್ತವೆ. ಕಾಡಾನೆಗಳು ಗ್ರಾಮ ಮತ್ತು ಹೊಲ ಗದ್ದೆಗಳಿಗೆ ನುಗ್ಗುವುದನ್ನು ತಡೆಯಲು ಅರಣ್ಯ ಇಲಾಖೆಯು ಅರಣ್ಯದ ಸುತ್ತ ಕಂದಕ ನಿರ್ಮಿಸಿ ಸೌರಶಕ್ತಿ ಆಧಾರಿತ ಬೇಲಿಗಳನ್ನು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿಯಾಗಿ ನಿರ್ಮಿಸಿತ್ತು. ಆದರೆ ಆನೆಗಳು ಸೌರಬೇಲಿ ಕಂಬವನ್ನು ತುಳಿದು ರೈತರ ತೋಟಗಳಿಗೆ ನುಗ್ಗುತ್ತವೆ. ತಾಲ್ಲೂಕಿನ 30ಕ್ಕಿಂತಲೂ ಹೆಚ್ಚು ರೈತರು ಬೆಳೆನಷ್ಟ ಅನುಭವಿಸಿದ್ದು ಅವರೆಲ್ಲರೂ ಬೆಳೆನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ರೈತರೊಬ್ಬರು ತಿಳಿಸಿದರು.

ಇನ್ನೂ ನನಸಾಗದ ಆನೆ ಅಭಯಾರಣ್ಯ

ಕಾಮಸಮುದ್ರ ಅರಣ್ಯ ಪ್ರದೇಶವನ್ನು ಆನೆ ಅಭಯಾರಣ್ಯ ಮಾಡುವುದಾಗಿ 10 ವರ್ಷಗಳ ಹಿಂದೆಯೇ ಘೋಷಣೆ ಮಾಡಲಾಗಿತ್ತು. ಆದರೆ ದಶಕ ಕಳೆದರೂ ಆನೆ ಅಭಯಾರಣ್ಯವು ಇನ್ನೂ ಘೋಷಣೆಯಾಗಿಯೇ ಇದೆ. ಇದರಿಂದಾಗಿ ಆನೆ ದಾಳಿಗೆ ರೈತರು ಸಂತ್ರಸ್ತರಾಗುವುದು ಮುಂದುವರಿದಿದೆ ಎಂದು ಆನೆ ದಾಳಿ ನಿಯಂತ್ರಣ ಹೋರಾಟಗಾರ ತೊಪ್ಪನಹಳ್ಳಿ ಮಲ್ಲಿಕಾರ್ಜುನ ರೆಡ್ಡಿ ಹೇಳಿದರು. ಎರಡು ಎಕರೆ ಬೆಳೆಯಲಾಗಿದ್ದ ರಾಗಿ ಬೆಳೆಯು ಆನೆ ದಾಳಿಗೆ ಹಾನಿಗೀಡಾಗಿದೆ. ಬೆಳೆನಷ್ಟ ಪರಿಹಾರಕ್ಕೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ ವರ್ಷವಾದರೂ ಏನೂ ಪ್ರಯೋಜನವಾಗಿಲ್ಲ ಎಂದು ರಾಮಕೃಷ್ಣಪುರ ಗ್ರಾಮದ ರೈತ ಗೋವಿಂದಪ್ಪ ಬೇಸರ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿ ವಸ್ತುನಿಷ್ಠವಾಗಿ ಬೆಳೆಹಾನಿ ಪರಿಶೀಲಿಸದೆ ತಮ್ಮ ಮನಸ್ಸಿಗೆ ಬಂದಂತೆ ಬೆಳೆನಷ್ಟ ಅಂದಾಜು ಮಾಡುತ್ತಾರೆ. ಸೂಕ್ತ ರೀತಿಯ ಬೆಳೆನಷ್ಟ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ
ಮುರಳಿ, ಯುವ ರೈತ, ತಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.