ಪ್ರಜಾವಾಣಿ ವಾರ್ತೆ

ಬಂಗಾರಪೇಟೆ: ‘ನನ್ನ ರಾಜಕೀಯ ಭವಿಷ್ಯ ನಿರ್ಧರಿಸುವುದು ಬೆಂಗಳೂರಿನಿಂದ ಬರುವವರಲ್ಲ. ಬಂಗಾರಪೇಟೆ ಕ್ಷೇತ್ರದ ಜನತೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾಜಿ ಸಂಸದರಿಗೆ ಹೆಸರೇಳದೆ ತಿರುಗೇಟು ನೀಡಿದರು.

ನಗರದ ಪುರಸಭೆ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.

‘ಬಾ ಅಣ್ಣ ಕ್ಷೇತ್ರಕ್ಕೆ ಬಂದು ಕೆಲಸ ಮಾಡಿ, ಬಂಗಾರಪೇಟೆ ಕ್ಷೇತ್ರದ ಜನತೆ ನಮ್ಮ ರಾಜಕೀಯ ಭವಿಷ್ಯ ನಿರ್ಧರಿಸುತ್ತಾರೆ’ ಎಂದರು.

ಜನ ಸಾಮಾನ್ಯರ ಕೆಲಸ ಕಾರ್ಯಗಳು ಸಕಾಲದಲ್ಲಿ ಮಾಡುವ ಸಲುವಾಗಿ ಬಂಗಾರಪೇಟೆ ತಾಲ್ಲೂಕಿಗೆ ಪ್ರತ್ಯೇಕವಾಗಿ ಸ್ಥಳೀಯ ಯೋಜನಾ ಪ್ರಾಧಿಕಾರವನ್ನು ಮಾಡಲಾಗಿದೆ. ಇದನ್ನು ಜನತೆ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.

‘ಕಾಂಗ್ರೆಸ್ ಪಕ್ಷವು ಜಾತ್ಯಾತೀತವಾಗಿದ್ದು, ಸಾಮಾಜಿಕ ನ್ಯಾಯದ ಪರವಾಗಿದೆ. ಪಕ್ಷವು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸಮಯದಲ್ಲಿ ಅವಕಾಶ ನೀಡುವುದು. ಅವಕಾಶ ವಂಚಿತರಿಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅವಕಾಶ ಕಲ್ಪಿಸುವುದಾಗಿ’ ಭರವಸೆ ನೀಡಿದರು.

‘ಇಂದಿನಿಂದ ಮತಗಳ್ಳತನ ಅಭಿಯಾನ ಆರಂಭ ಮಾಡಲಾಗುತ್ತದೆ. ನರೇಂದ್ರ ಮೋದಿ ಅವರು ಯಾವ ರಾಜ್ಯಗಳಲ್ಲಿ ಗೆಲುವು ಸಾಧಿದಿದ್ದಾರೋ ಅಲ್ಲೆಲ್ಲಾ ಮತಗಳ್ಳತನ ಮಾಡಿ ಅಧಿಕಾರ ಪಡೆದಿದ್ದಾರೆ. ಹಾಗಾಗಿ ತಾಲ್ಲೂಕಿನಾದ್ಯಂತ ಎರಡು ಲಕ್ಷ ಸಹಿ ಸಂಗ್ರಹಿಸಬೇಕು’ ಎಂದು ಕರೆ ನೀಡಿದರು.

ಬಂಗಾರಪೇಟೆ ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಆರ್.ಮುನಿರಾಜು, ‘ಪಕ್ಷವೂ ನನ್ನ ಸೇವೆ ಗುರುತಿಸಿ ನೀಡಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡುವುದಾಗಿ’ ತಿಳಿಸಿದರು.

ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ನಾಗರಾಜ್, ಟಿ.ಮಹದೇವಪ್ಪ, ಎ.ಬಾಬು, ಎಚ್.ಕೆ.ನಾರಾಯಣಸ್ವಾಮಿ, ಸದಸ್ಯರಾದ ದೇಶಿಹಳ್ಳಿ ವೆಂಕಟರಾಮ್, ನಂಜಪ್ಪ, ನಾಗವೇಣಿ, ಗ್ರಾ.ಪಂ.ಅಧ್ಯಕ್ಷ ಆದಿ ನಾರಾಯಣ (ಕುಟ್ಟಿ), ಮಂಜುಳ ಜಯಣ್ಣ, ಪ್ರಭಾಕರ್ ರೆಡ್ಡಿ, ಲಕ್ಷ್ಮಿ ನಾರಾಯಣ, ಸಿ.ಅಪ್ಪಯ್ಯಗೌಡ, ಎಲ್. ರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಂಗಾಚಾರಿ, ಚಿನ್ನಕೋಟೆ ಅಂಬರೀಶ್, ಮಲ್ಲೇಶ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.