ಮಂಗಳವಾರ, ಮಾರ್ಚ್ 21, 2023
21 °C

ಬಂಗಾರು ತಿರುಪತಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇತಮಂಗಲ: ಭರತ ಹುಣ್ಣಿಮೆ ಪ್ರಯುಕ್ತ ‘ಬಡವರ ಬಂಗಾರು ತಿರುಪತಿ’ ಎಂದೇ ಪ್ರಖ್ಯಾತಿ ಪಡೆದಿರುವ ಬಂಗಾರು ತಿರುಪತಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಬ್ರಹ್ಮ ರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಕೆಜಿಎಫ್ ತಾಲ್ಲೂಕಿನ ಬಂಗಾರು ತಿರುಪತಿ (ಗುಟ್ಟಹಳ್ಳಿ)ಯ ಶ್ರೀವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷವೂ ಭರತ ಹುಣ್ಣಿಮೆಯಂದು ರಥೋತ್ಸವ ಹಾಗೂ ತೆಪ್ಪೋತ್ಸವ ನಡೆಸುವುದು ಸಂಪ್ರದಾಯ.

ಶನಿವಾರ ರಾತ್ರಿ ವೆಂಕಟರಮಣ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಕಲ್ಯಾಣೋತ್ಸವ ಸೇರಿದಂತೆ ಪುಪ್ಪ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಕೊಳದಲ್ಲಿ ದೇವಿಯ ಪ್ರದರ್ಶನ ಮಾಡುವ ಮೂಲಕ ತೆಪ್ಪೋತ್ಸವ
ನಡೆಸಲಾಯಿತು.

ಭಾನುವಾರ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು. ಭರತ ಹುಣ್ಣಿಮೆ ಪ್ರಯುಕ್ತ ದೇವಾಲಯ ಆಡಳಿತ ಮಂಡಳಿಯಿಂದ ಭಕ್ತರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ವಿದ್ಯುತ್ ದೀಪಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು.

ಪೂಜಾ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಅಶೋಕ್ ಕೃಷ್ಣಪ್ಪ, ಮಾಜಿ ಶಾಸಕ ವೈ. ಸಂಪಂಗಿ, ದೇವಾಲಯ ಸಮಿತಿಯ ಸದಸ್ಯರಾದ ನವೀನ್ ರಾಮ್, ರೇಣುಕಾ ಜಯರಾಮ್ ರೆಡ್ಡಿ, ಪಾಪೇಗೌಡ, ಪ್ರಧಾನ ಅರ್ಚಕ ಶಾಮಚಾರಿ,
ನರಸಿಂಹ ಗೌಡ, ವಿಜಯಲಕ್ಷ್ಮೀ ಬಾಲಾಜಿ, ಚಿನ್ನಪ್ಪ, ಸ್ಥಳೀಯ ಮುಖಂಡರಾದ ಹುಲ್ಕೂರು ಹರಿಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಶಂಕರಪ್ಪ, ಹಂಗಳ ರಮೇಶ್, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಸುಬ್ರಮಣಿ, ಪೇಷ್ಕಾರ ಸುರೇಶ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.