ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯನ್ನು ಭ್ರಷ್ಟಗೊಳಿಸುವ ಜನರೇ ಹೆಚ್ಚಿದ್ದಾರೆ: ‌ಬರಗೂರು ರಾಮಚಂದ್ರಪ್ಪ

ಕನ್ನಡ ಭಾಷೆ ಕುರಿತು ತಪ್ಪು ಗ್ರಹಿಕೆ
Published 12 ಸೆಪ್ಟೆಂಬರ್ 2023, 11:15 IST
Last Updated 12 ಸೆಪ್ಟೆಂಬರ್ 2023, 11:15 IST
ಅಕ್ಷರ ಗಾತ್ರ

ಕೋಲಾರ: ‘ಕನ್ನಡ ಭಾಷೆ ಕುರಿತು ಜನರಲ್ಲಿ ತಪ್ಪು ಗ್ರಹಿಕೆ ಇದೆ. ಕನ್ನಡ ನಾಶವಾಗಲಿದೆ ಎಂಬುದಾಗಿ ತಪ್ಪಾಗಿ ತಿಳಿದುಕೊಂಡಿದ್ದಾರೆ. ನಾನು 1969–70ರಲ್ಲಿ ಎಂ.ಎ ಮಾಡಲು ಬಂದಾಗ ಬೆಂಗಳೂರನ್ನು ತಮಿಳು ಭಾಷೆ ಆವರಿಸಿಕೊಳ್ಳಲಿದೆ ಎನ್ನುತ್ತಿದ್ದರು. ಆದರೆ, ಅದು ಈವರೆಗೆ ಸಾಧ್ಯವಾಗಿಲ್ಲ’ ಎಂದು ಸಾಹಿತಿ ಬರಗೂರು ರಾಮಚಂದ್ರ ಹೇಳಿದರು.

ನಗರದಲ್ಲಿ ಮಂಗಳವಾರ ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿ, ‘ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ 6,703 ಭಾಷೆಗಳಿವೆ. ಸಣ್ಣಪುಟ್ಟ 30 ಸಾವಿರ ಭಾಷೆಗಳು‌ ನಾಶವಾಗಿವೆ. 10 ಭಾಷೆಗಳು ಜಗತ್ತಿನ ಶೇ 50 ಭಾಗವನ್ನು ಆವರಿಸಿಕೊಂಡಿವೆ. ಅದರಲ್ಲಿ ಕನ್ನಡವೂ ಒಂದು’ ಎಂದರು.

‘ಜನ ಬಳಕೆ, ಶಿಕ್ಷಣದಲ್ಲಿ ಕನ್ನಡ ಕಲಿಕೆಯಿಂದ ಕನ್ನಡ ಉಳಿಯಲಿದೆ. ಕನ್ನಡಕ್ಕೆ ಆ ಶಕ್ತಿ ಇದೆ‌. ಇದು ಜನ ಭಾಷೆ. ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಇದಕ್ಕಿದೆ. ಯಾವ ಭಾಷೆ ಅರಗಿಸಿಕೊಳ್ಳುತ್ತದೆಯೋ ಆ ಭಾಷೆ ಉಳಿಯುತ್ತದೆ’ ಎಂದು ಪ್ರತಿಪಾದಿಸಿದರು.

‘ಭಾಷೆಯನ್ನು ಭ್ರಷ್ಟಗೊಳಿಸುವ ಜನರೇ ಹೆಚ್ಚಿದ್ದಾರೆ. ಒಂದು ಕಡೆ ಆರ್ಥಿಕ ಭ್ರಷ್ಟಾಚಾರ‌, ಇನ್ನೊಂದು ಕಡೆ ಭಾಷಿಕ ಭ್ರಷ್ಟಾಚಾರ ನಡೆಯುತ್ತಿದ್ದು, ಹುಸಿ ವ್ಯಾಖ್ಯಾನ ಮಾಡಲಾಗುತ್ತಿದೆ. ಭಾಷಿಕ ಹಿಂಸೆ ನಡೆಯುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT