ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆರಿಗೆ ಹೆಚ್ಚಿಸಿದ ಕರ್ನಾಟಕ ಸರ್ಕಾರ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ

Published 15 ಜೂನ್ 2024, 11:08 IST
Last Updated 15 ಜೂನ್ 2024, 11:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್‌ ₹ 3.02 ಹಾಗೂ ಡೀಸೆಲ್‌ ಬೆಲೆಯಲ್ಲಿ ₹3 ಹೆಚ್ಚಳವಾಗಿದೆ.

ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ಶನಿವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಪೆಟ್ರೋಲ್ ಚಿಲ್ಲರೆ ಮಾರಾಟದ ಬೆಲೆ ಇಂದಿನಿಂದ ₹102.85 ಹಾಗೂ ಡೀಸೆಲ್‌ ಬೆಲೆ ₹88.93 ಆಗುತ್ತದೆ. ಈ ದರವು, ಸಾಗಣೆ ವೆಚ್ಚದ ಆಧಾರದಲ್ಲಿ ರಾಜ್ಯದ ಬೇರೆಬೇರೆ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಾಸವಾಗಲಿದೆ.

ಪೆಟ್ರೋಲ್, ಡೀಸೆಲ್ ದರ:

ಪೆಟ್ರೋಲ್

 • ಹಳೆಯ ದರ: 99.83

 • ಪರಿಷ್ಕೃತ ದರ: 102.85

ಡೀಸೆಲ್:

 • ಹಳೆಯ ದರ: 85.93

 • ಪರಿಷ್ಕೃತ ದರ: 88.93

ಪೆಟ್ರೋಲ್ (ಪವರ್):

 • ಹಳೆಯ ದರ: 106.66

 • ಪರಿಷ್ಕೃತ ದರ: 109.89

ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ದರ ಇಳಿಸಿದ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ₹2ರಷ್ಟು ಇಳಿಕೆಯಾಗಿತ್ತು.

ಪರಿಣಾಮಗಳೇನು?

 • ಸ್ವಂತ ವಾಹನ ಹೊಂದಿದವರಿಗೆ ಆರ್ಥಿಕ ಹೊರೆ

 • ಮಹಾನಗರಗಳಲ್ಲಿ ಕ್ಯಾಬ್‌ ಪ್ರಯಾಣ ದುಬಾರಿ

 • ಸರಕು ಸಾಗಣೆ ವೆಚ್ಚ ಅಧಿಕ

 • ಕೃಷಿಗೆ ಪೂರಕವಾದ ಟ್ರ್ಯಾಕ್ಟರ್, ಟಿಲ್ಲರ್, ಪಂಪ್‌ಸೆಟ್‌ಗಳ ಬಳಕೆ ವೆಚ್ಚ ಏರಿಕೆ

 • ಸಾಗಣೆ ವೆಚ್ಚ ಹೆಚ್ಚಳದಿಂದ ದಿನಸಿ, ತರಕಾರಿ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಳ

 • ಸಾರ್ವಜನಿಕ ಬಳಕೆಯ ವಾಹನಗಳಾದ ಬಸ್, ಟೆಂಪೊ, ಜೀಪುಗಳ ಪ್ರಯಾಣ ದರ ಹೆಚ್ಚಳ

 • ಶಾಲಾ–ಕಾಲೇಜುಗಳ ವಾಹನಗಳಿಗೂ ತಟ್ಟುವ ಬಿಸಿ

 • ಡೀಸೆಲ್ ಆಧಾರಿತ ಮೀನುಗಾರಿಕೆ ದೋಣಿ, ಬೋಟ್‌ಗಳಿಗೆ ಹೊರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT