ಕೋಲಾರ: ಸಮಾಜದಲ್ಲಿನ ಜಾತಿ, ಅಸ್ಪೃಶ್ಯತೆ, ಮೌಢ್ಯ ತೊಲಗಿಸಲು ಹಾಗೂ ಸಮ ಸಮಾಜ ನಿರ್ಮಾಣ ಮಾಡಲು ಅನೇಕ ಶರಣರು ರಕ್ತ ಹರಿಸಿದ್ದಾರೆ, ಬಲಿದಾನ ಮಾಡಿದ್ದಾರೆ. ಅದು ಸಾರ್ಥಕವಾಗಬೇಕಿದೆ ಎಂದು ಬಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಹೇಳಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣನ ಇಷ್ಟ ಲಿಂಗ ಮುಗಿಲಗಲ, ಜಗದಗಲ. ಅನುಭವ ಮಂಟಪದ ಮೂಲಕ ಜಾತಿ ಹೋಗಲಾಡಿಸಲು ಪ್ರಯತ್ನಿಸಿದರು. ಮೊದಲು ಪ್ರಜಾಧರ್ಮ ಕಟ್ಟಿ ಕೊಟ್ಟವರೇ ಬಸವಣ್ಣ. ಸಮ ಸಮಾಜ ಸ್ಥಾಪಿಸಲು ಪ್ರಯತ್ನಿಸಿದರು ಎಂದರು.

ನಾವು ಜಮೀನಿನಲ್ಲಿ ಯಾವ ಬೀಜ ಬಿತ್ತುತ್ತೇವೆಯೋ ಅದೇ ರೀತಿ ಬೆಳೆ ಬರುತ್ತದೆ. ಹಾಗೆಯೇ ಯುವಶಕ್ತಿ ಕೂಡ. ಯುವ ಶಕ್ತಿ ನಮ್ಮ ದೇಶದ ದೊಡ್ಡ ಶಕ್ತಿ. ನೈತಿಕತೆ, ಅಧ್ಯಾತ್ಮ ಬೆಳೆಸಬೇಕಿ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಆರ್.ಸುದರ್ಶನ್ ಮಾತನಾಡಿ, ಬಸವಣ್ಙನ ವಚನಗಳ ಕುರಿತು ಅರಿವು ಉಂಟು ಮಾಡುವ ಜೊತೆಗೆ ಸಂವಿಧಾನ ಗಟ್ಟಿಗೊಳಿಸುವ ಕಡೆಗೂ ಗಮನ ಹರಿಸಬೇಕು ಎಂದರು.

ಬಸವಣ್ಣ ಜಗತ್ತಿನ ಪರಿಪೂರ್ಣ ವ್ಯಕ್ತಿ. ಜಾತಿ ಹಾಗೂ ಅಸಮಾನತೆ ವಿರುದ್ಧ ಹೋರಾಡಿದರು. ಅವರ ವಚನ ಸಾಹಿತ್ಯ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರ ಆಗಿದೆ. ಅದರ ಮೇಲೆ ಜನರಿಗೆ ವಿಶ್ವಾಸ ಇದೆ ಎಂಬುದು ಇದರ್ಥ ಎಂದು ನುಡಿದರು .

ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ‘ಜಾತಿ, ಮತ, ಧರ್ಮ, ಲಿಂಗ ತಾರತಮ್ಯ ಸಾವಿರಾರು ವರ್ಷಗಳಿಂದ ಬೇರೆಬೇರೆ ರೂಪಗಳಲ್ಲಿ ನೆಲೆ ನಿಂತಿದೆ. ಸ್ತ್ರೀ ಶೋಷಣೆ ನಿರಂತವಾಗಿದೆ. ಇಂದಿಗೂ ಮಹಿಳೆಯರ ಶೋಷಣೆ ನಡೆಯುತ್ತಿದೆ. ಇವುಗಳನ್ನು ಹೋಗಲಾಡಿಸಲು ಶರಣರು ವಚನಗಳು ಮೊದಲ ದಿಕ್ಸೂಚಿ ಆದವು. ಬಸವಣ್ಣ ಈ ಅರಿವನ್ನು ಮೂಡಿಸಿದ ಮಹಾನ ಚೇತನ. ಇತ್ತೀಚೆಗೆ ಕಾನೂನು ಬಲಗೊಂಡಿದೆ. ಹೆಣ್ಣುಮಕ್ಕಳು ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ’ ಎಂದರು.

ಸಮಾಜದಲ್ಲಿನ ತಾರತಮ್ಯ ಪೂರ್ಣ ಪ್ರಮಾಣದಲ್ಲಿ ಹೋಗಲಾಡಿಸಲು ಎಲ್ಲರೂ ಶ್ರಮಿಸಿದಾಗ ಶರಣ ಚಳವಳಿ ಸಾರ್ಥಕ್ಯವಾಗುತ್ತದೆ. ಬಸವಣ್ಣನವರ ಆಲೋಚನೆಗಳನ್ನು ಸಾಣೇಹಳ್ಳಿ ಮಠ ಮತ್ತೆ ಚಲನೆಗೆ ಕೊಂಡೊಯ್ಯುತ್ತಿರುವ ಕಾರಣ ಕೆಡುತ್ತಿರುವ ಸಮಾಜ ಸರಿ ದಿಕ್ಕಿನಲ್ಲಿ ಸಾಗುವ ಆಶಯ ಇಟ್ಟುಕೊಳ್ಳಬಹುದು ಎಂದು ಆಶಯ ವ್ಯಕ್ತಪಡಿಸಿದರು.

ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಸ್ವಾಮೀಜಿ, ಬೀದರ್ ಜಿಲ್ಲೆಯ ಹುಣಸೂರು ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಶೇಗುಣಗಿ ಮಹಂತಪ್ರಭು ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ಸೌಹಾರ್ದ ಮಾನವತೆಯ ನಡಿಗೆಗೆ ನಗರದ ಬಂಗಾರಪೇಟೆ ವೃತ್ತದಲ್ಲಿ ಚಾಲನೆ ದೊರೆಯಿತು. ಪಾದಯಾತ್ರೆಯಲ್ಲಿ ಸ್ತಬ್ಧಚಿತ್ರದ ಜೊತೆ ಸ್ವಾಮೀಜಿಗಳು ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಾಣೇಹಳ್ಳಿ ಕಲಾ ತಂಡ ವಚನ ಗಾಯನ ನಡೆಸಿಕೊಟ್ಟಿತು. ಸಂಯೋಜಕ ಜೆ.ಜಿ.ನಾಗರಾಜ ನಿರೂಪಿಸಿದರು, ಅಶೋಕ್ ಲೋಣಿ ಸ್ವಾಗತಿಸಿದರು.

ಜಾನಪದ ಗಾಯಕ ಹಾಗೂ ಸಂಯೋಜಕ ಪಿಚ್ಚಳ್ಳಿ ಶ್ರೀನಿವಾಸ್, ವಿ.ಗೀತಾ, ಬಿ.ಎಂ.ಚನ್ನಪ್ಪ ಶರಣರು, ಬಿ.ಸುರೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಗೋಪಾಲಗೌಡ, ಗಮನ ಸಂಸ್ಥೆಯ ಶಾಂತಮ್ಮ, ಅರಿವು ಭಾರತ ಸಂಸ್ಥೆಯ ಅರಿವು ಶಿವಪ್ಪ, ರೆವರೆಂಡ್ ಗಮಾಲಿಯನ್, ಡಿಎಸ್ಎಸ್ ಸಂಚಾಲಕ ಎಂ.ರವಿ, ಈ ನೆಲ ಈ ಜಲ ವೆಂಕಟಾಚಲಪತಿ, ವಿವಿಧ ಸಂಘಟನೆ ಮುಖಂಡರು, ವಿದ್ಯಾರ್ಥಿಗಳು ಇದ್ದರು.

ಬಸವಣ್ಣನ ವಿಚಾರಗಳಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಸಂವಿಧಾನದ ಹಕ್ಕು ಜವಾಬ್ದಾರಿ ಅರಿಯಬೇಕು. ಸರಿಯಾಗಿ ಜವಾಬ್ದಾರಿ ನಿಭಾಯಿಸದವರಿಗೆ ಹಕ್ಕು ಪಡೆಯುವ ನೈತಿಕತೆ ಇರಲ್ಲ
ವಿ.ಆರ್.ಸುದರ್ಶನ್ ವಿಧಾನ ಪರಿಷತ್ ಮಾಜಿ ಸಭಾಪತಿ

ಭಾಷಣಗಳಲ್ಲಿ ಉಪನ್ಯಾಸಗಳಲ್ಲಿ ಜಾತಿ ಮತ ತೊಡೆದು ಹಾಕಬೇಕೆನ್ನುವರು ಇಂದು ಜಾತಿ ಮತಗಳ ಹಿಂದೆ ಓಡಾಡುತ್ತಿದ್ದಾರೆ. ಇವರು ಬದ್ಧತೆ ಇಲ್ಲದ ಜನ
ಬಿ.ಎಲ್.ಶಂಕರ್ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.