ಮುಳಬಾಗಿಲು: ₹10 ಸಾವಿರ ಬೆಟ್ಟಿಂಗ್ ಕಟ್ಟಿ, ನೀರು ಮಿಶ್ರಣ ಮಾಡದೇ, ಐದು ಬಾಟಲ್ ಮಧ್ಯಪಾನ ಮಾಡಿದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.

ತಾಲ್ಲೂಕಿನ ಪೂಜಾರಹಳ್ಳಿ ಗ್ರಾಮದ ಕಾರ್ತೀಕ್ (21) ಅದೇ ಗ್ರಾಮದ ಸ್ನೇಹಿತ ವೆಂಕಟರೆಡ್ಡಿ, ಸುಬ್ರಮಣಿ ಹಾಗೂ ಇತರರ ಜೊತೆಗೆ ₹10 ಸಾವಿರಕ್ಕೆ ಬೆಟ್ಟಿಂಗ್ ಕಟ್ಟಿದ್ದ. ಅದರಂತೆ ನೀರು ಬೆರೆಸದೇ ಐದು ಬಾಟಲ್ ಒರಿಜಿನಲ್ ಚಾಯ್ಸ್ ಮಧ್ಯಪಾನವನ್ನು ನೇರವಾಗಿ ಕುಡಿದ ಪರಿಣಾಮವಾಗಿ ತೀರಾ ಅಸ್ವಸ್ಥನಾಗಿದ್ದ. ಕೂಡಲೇ ಸ್ಥಳೀಯರು ಅವನನ್ನು ಮುಳಬಾಗಿಲು ಆಸ್ಪತ್ರೆಗೆ ಸಾಗಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೃತನಿಗೆ 9 ದಿನಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು.

ಕಾರ್ತೀಕ್ ಗೆ ಅಪಾಯಕಾರಿಯಾಗಿ, ಅತಿಯಾಗಿ ಮದ್ಯ ಕುಡಿಸಿ ಸಾವಿಗೆ ಪ್ರಚೋದನೆ ನೀಡಿದ ಕಾರಣಕ್ಕೆ ವೆಂಕಟರೆಡ್ಡಿ, ಸುಬ್ರಮಣಿ ಹಾಗೂ ಇನ್ನೂ ನಾಲ್ಕು ಮಂದಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ವೆಂಕಟರೆಡ್ಡಿ ಹಾಗೂ ಸುಬ್ರಮಣಿಯನ್ನು ಬಂಧಿಸಿದ್ದು ಉಳಿದ ನಾಲ್ಕು ಮೂರು ಮಂದಿ ಪರಾರಿಯಾಗಿದ್ದಾರೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.