ಕೋಲಾರ: ನಗರ ಹೊರವಲಯದ ಟಮಕ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಬಳಿ ಸರ್ವಿಸ್ ರಸ್ತೆ ಪಕ್ಕ ಬುಧವಾರ ಬೆಳಿಗ್ಗೆ ಪತ್ತೆಯಾಗಿ ಆತಂಕ ಸೃಷ್ಟಿಸಿದ್ದ ಸೂಟ್‌ಕೇಸ್ ಅನ್ನು ಬೆಂಗಳೂರಿನ ಬಾಂಬ್ ನಿಷ್ಕ್ರಿಯ ದಳದವರು ಡಿಟೋನೇಟರ್ ಮೂಲಕ ಸ್ಫೋಟ ಮಾಡಿ ನಾಶಗೊಳಿಸಿದರು.
ಮೂರು ಬಾರಿ ಪರಿಶೀಲನೆ ನಡೆಸಿದ ನಿಷ್ಕ್ರಿಯ ದಳದವರು ಸೂಟ್‌ಕೇಸ್ ಇಟ್ಟು ಸ್ಕ್ಯಾನರ್ ಮೂಲಕ ಲ್ಯಾಪ್‌ಟಾಪ್‌ನಲ್ಲಿ ವಿಶ್ಲೇಷಿಸಿದರು.
ಸೂಟ್‌ಕೇಸ್ ಒಳಗೆ ಏನೂ ಇರಲಿಲ್ಲ. ಇದು ಸೆನ್ಸರ್ ಆಧರಿತ ಸೂಟ್‌ಕೇಸ್ ಆಗಿದೆ. ನಿರಂತರವಾಗಿ ವಿಚಿತ್ರ ಶಬ್ದ ಮಾಡುತ್ತಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದರು. ಸತತ ನಾಲ್ಕು ಗಂಟೆ ಕಾರ್ಯಾಚರಣೆ ನಡೆಯಿತು.
ಕ್ರೌನ್ ಕಂಪನಿಯ ಅತ್ಯಾಧುನಿಕ ಸೂಟ್‌ಕೇಸ್ ಎಂಬುದು ಗೊತ್ತಾಗಿದೆ. ಸೂಟ್'ಕೇಸ್ಸೂಟ್‌ಕೇಸ್ ಅನ್ನು ಯಾರು ತಂದು ಹಾಕಿದ್ದಾರೆ. ಉದ್ದೇಶವೇನು ಎಂಬುದರ ಬಗ್ಗೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ಎಸ್ಪಿ ನಿಖಿಲ್ ತಿಳಿಸಿದರು.