ಬೇತಮಂಗಲ: ತಾಲ್ಲೂಕಿನ ಐವಾರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ತಮ್ಮ ಕುಟುಂಬಕ್ಕೆ ಮಂಜೂರಾಗಿರುವ ಎರಡು ಎಕರೆ ಜಮೀನನ್ನು ಪ್ರಭಾವಿಗಳು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಕುಟುಂಬವೊಂದು, ಜಮೀನಿನಲ್ಲಿ ಗುಡಿಸಲು ನಿರ್ಮಿಸಿ, ಅಂಬೇಡ್ಕರ್ ಭಾವಚಿತ್ರದೊಂದಿಗೆ ಹೋರಾಟಕ್ಕೆ ಮುಂದಾಗಿದೆ.
‘20 ವರ್ಷದ ಹಿಂದೆ ನಮ್ಮ ತಾತ ಮುನಿಯಪ್ಪ ಅವರಿಗೆ ಕೃಷ್ಣಪ್ಪ ನಾಯ್ಡು ಎಂಬುವರು ಈ ಜಾಗ ಮಂಜೂರು ಮಾಡಿಸಿಕೊಟ್ಟಿದ್ದರು. ಈ ನಡುವೆ ನಾವು ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಹೋಗಿದ್ದೆವು. ಆಗ ಕೃಷ್ಣಪ್ಪ ನಾಯ್ಡು ಅವರ ಕುಟುಂಬಸ್ಥರು ಈ ಜಮೀನು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ಕುಟುಂಬದ ರವಿ ಆರೋಪ ಮಾಡಿದರು.
ದಲಿತ ಸಮುದಾಯದ ಶ್ರೀನಾಥ್ ನಾಸ್ತಿಕ, ರಂಗನಾಥ್, ಮಂಜುನಾಥ್, ಚಂದ್ರಶೇಖರ್, ಸುಬ್ರಮಣಿ, ವೆಂಕಟರಾಮ್ ಈ ವೇಳೆ ಇದ್ದರು.