ಗುರುವಾರ , ಡಿಸೆಂಬರ್ 1, 2022
27 °C

ಮಾಲೂರು: ಉಳ್ಳೇರಹಳ್ಳಿ ಚಲೋ, ಬೃಹತ್ ಪ್ರತಿಭಟನೆ, ಜೈ ಭೀಮ್ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು (ಕೋಲಾರ ಜಿಲ್ಲೆ): ತಾಲ್ಲೂಕಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರ ಗುಜ್ಜಕೋಲು ಮುಟ್ಟಿದ ಕಾರಣಕ್ಕೆ ಪರಿಶಿಷ್ಟ ಜಾತಿಯ ಬಾಲಕನಿಗೆ ದಂಡ ವಿಧಿಸಿದ್ದನ್ನು ಖಂಡಿಸಿ 'ಉಳ್ಳೇರಹಳ್ಳಿ' ಚಲೋ ಹಮ್ಮಿಕೊಂಡಿದ್ದು, ವಿವಿಧ ಪ್ರಗತಿಪರ ಸಂಘಟನೆಗಳ  ಸಾವಿರಾರು ಜನ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.

ಜೈ ಭೀಮ್ ಘೋಷಣೆ ಕೂಗುತ್ತಾ ದ್ವಿಚಕ್ರ ವಾಹನಗಳಲ್ಲಿ ಸಾಗಿ ಬಂದರು.

ಟೇಕಲ್ ರೈಲ್ವೆ ನಿಲ್ದಾಣದಿಂದ ಸೌಹಾರ್ದ ಜಾಥಾ ಆರಂಭವಾಗಿದ್ದು, ಉಳ್ಳೇರಹಳ್ಳಿಯ ಸಂತ್ರಸ್ತ ಕುಟುಂಬದ ನಿವಾಸದತ್ತ ದಾಪುಗಾಲು ಇಟ್ಟಿದ್ದಾರೆ.

ದಲಿತ ಸಂಘಟನೆ,‌ ರೈತ ಸಂಘಟನೆ,‌ ಮಹಿಳೆ ಸಂಘಟನೆ, ಸಿಪಿಐಎಂ, ಕನ್ನಡಪರ ಸಂಘಟನೆ, ಮುಸ್ಲಿಂ ಸಂಘಟನೆ, ಕೆಆರ್ ಎಸ್ ಪಕ್ಷದ ಕಾರ್ಯಕರ್ತರು, ವಿವಿಧ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು