ಶುಕ್ರವಾರ, ಫೆಬ್ರವರಿ 21, 2020
28 °C
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ತೆರೆ

ನೃತ್ಯ ಕಲೋತ್ಸವ: ಹಾವೇರಿ ಚಿಣ್ಣರು ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲಾ ಕೇಂದ್ರದಲ್ಲಿ 3 ದಿನಗಳಿಂದ ನಡೆಯುತ್ತಿದ್ದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗೆ ಶುಕ್ರವಾರ ತೆರೆ ಬಿದ್ದಿತು.

ನೃತ್ಯ ಕಲೋತ್ಸವದಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಮಾರುತಿನಗರ ಸರ್ಕಾರಿ ಪ್ರೌಢ ಶಾಲೆ ಮಕ್ಕಳ ತಂಡವು ಡೊಳ್ಳು ಮತ್ತು ಪೂಜಾ ಕುಣಿತಕ್ಕೆ ಪ್ರಥಮ ಬಹುಮಾನ ಪಡೆಯಿತು. ಮಂಡ್ಯ ಜಿಲ್ಲೆಯ ಅರಸಿನಕೆರೆ ಮದ್ದೂರಿನ ಶ್ರೀಕಾಳಿಕಾಂಬ ಪ್ರೌಢ ಶಾಲೆ ಮಕ್ಕಳ ತಂಡ ದ್ವಿತೀಯ ಬಹುಮಾನ ಗಳಿಸಿತು. ಬೆಂಗಳೂರು ಉತ್ತರ ಜಿಲ್ಲೆ ಮತ್ತಿಕೆರೆಯ ಗೋಕುಲ ಉನ್ನತೀಕರಿಸಿದ ಸರ್ಕಾರಿ ಪ್ರೌಢ ಶಾಲಾ ಮಕ್ಕಳು ತೃತೀಯ ಸ್ಥಾನ ಪಡೆದರು.

ನಾಟಕ ಕಲೋತ್ಸವದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಯಶವಂತಪುರದ ಬಾಪು ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ರೋಟರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಹಳ್ಳಿಬೈಲು ಸರ್ಕಾರಿ ಪ್ರೌಢ ಶಾಲೆ ಮಕ್ಕಳ ತಂಡ ತೃತೀಯ ಸ್ಥಾನ ಗಳಿಸಿತು.

ಸಂಗೀತ ಕಲೋತ್ಸವದಲ್ಲಿ ಹಾವೇರಿ ಜಿಲ್ಲೆಯ ಮಾರುತಿ ನಗರ ಸರ್ಕಾರಿ ಪ್ರೌಢ ಶಾಲೆ ಮಕ್ಕಳು ಪ್ರಥಮ, ಉಡುಪಿ ಜಿಲ್ಲೆ ಕಾರ್ಕಳದ ಜೀಸಸ್ ಇಂಗ್ಲಿಷ್ ಮಾಧ್ಯಮ ಶಾಲೆ ಮಕ್ಕಳು ದ್ವಿತೀಯ ಹಾಗೂ ಮಂಡ್ಯ ಜಿಲ್ಲೆ ಮಾರದೇವನಹಳ್ಳಿ ಸತ್ಯಸಾಯಿ ಪ್ರೌಢಶಾಲೆ ಚಿಣ್ಣರು ತೃತೀಯ ಸ್ಥಾನ ಪಡೆದರು.

ದೃಶ್ಯ ಕಲೋತ್ಸವದಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿಯ ತುಂಗಲ್ ಪ್ರೌಢ ಶಾಲೆ ಚಿಣ್ಣರು ಪ್ರಥಮ ಸ್ಥಾನ ಪಡೆದರೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಎನ್‍ಎಸ್‌ವಿಕೆ ಪ್ರೌಢ ಶಾಲಾ ಮಕ್ಕಳು ದ್ವಿತೀಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಟೆಂಕಿನ ವಿವೇಕಾನಂದ ಕನ್ನಡ ಪ್ರೌಢ ಶಾಲೆ ಮಕ್ಕಳು ತೃತೀಯ ಸ್ಥಾನ ಗಳಿಸಿದರು.

ಭಾವಗೀತೆ ಸ್ಪರ್ಧೆ: ಹಾಸನ ಜಿಲ್ಲೆಯ ಭಾರ್ಗವ್ ವಿ.ಭಾರದ್ವಾಜ್ ಪ್ರಥಮ ಸ್ಥಾನ, ಕೋಲಾರದ ಚಿನ್ಮಯ ಶಾಲೆಯ ಡಿ.ಆರ್.ರಕ್ಷಾ ದ್ವಿತೀಯ ಮತ್ತು ಮಂಡ್ಯ ಜಿಲ್ಲೆಯ ಡಿ.ಎಸ್.ವರ್ಷಿಣಿ ತೃತೀಯ ಸ್ಥಾನ ಪಡೆದರು.

ಭರತ ನಾಟ್ಯದಲ್ಲಿ ಉಡುಪಿ ಜಿಲ್ಲೆಯ ನಿಯಾತಿ ಪ್ರಥಮ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರ್.ಹರ್ಷಿತಾ ದ್ವಿತೀಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಹರಿಪ್ರಿಯಾ ಹೊಸಮನಿ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)