ವೇಮಗಲ್: ಕ್ಯಾಲನೂರಿನಲ್ಲಿ ಸರ್ಕಾರಿ ಪಿಯು ಕಾಲೇಜು ಆರಂಭಿಸುವ ಮೂಲಕ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎನ್ನುವ ಒಕ್ಕೊಲರ ಅಭಿಪ್ರಾಯ ವ್ಯಕ್ತವಾಗಿದೆ.

ಹೋಬಳಿಯಲ್ಲಿಯೇ ದೊಡ್ಡ ಗ್ರಾಮ ಎನಿಸಿಕೊಂಡಿರುವ ಕ್ಯಾಲನೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಸೇರಿದಂತೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಕೃಷಿ ಮತ್ತು ದಿನಗೂಲಿ ಇಲ್ಲಿನ ಪ್ರಮುಖ ಕಸುಬಾಗಿದೆ.

ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿಯೇ ಅತಿ ಹೆಚ್ಚು ದಾಖಲಾತಿ ಇರುವ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಬಹಳಷ್ಟು ವಿದ್ಯಾರ್ಥಿನಿಯರು 10ನೇ ತರಗತಿ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ದೂರದ ಊರುಗಳಿಗೆ ಹೋಗಲು ಸಾಧ್ಯವಾಗದೆ ತಮ್ಮ ವಿದ್ಯಾಭ್ಯಾಸ ಮುಟಕುಗೊಳಿಸುತ್ತಿದ್ದಾರೆ. ಸುತ್ತಮುತ್ತಲಿನ ಕಾಡಳ್ಳಿ, ಅಮ್ಮಲ್ಲೂರು, ತಿಪ್ಪೇನಹಳ್ಳಿ, ಬೆಳ್ಳಳ್ಳಿ, ರಘುಪತಿ ಅಗ್ರಹಾರ, ರಘುಪತಿ ಹೊಸಳ್ಳಿ, ಬೈರಂಡಳ್ಳಿ, ಕಾಮಂಡಳ್ಳಿ, ಕಡ್ಗಟ್ಟೂರು, ಚಲ್ಡಿಗಾನಹಳ್ಳಿ, ಪಾಡಿಗನಹಳ್ಳಿ, ಚನ್ನಸಂದ್ರ ಸರಿದಂತೆ ಸುತ್ತಮುತ್ತಲಿನ 20ಕ್ಕೂ ಹೆಚ್ಚಿನ ಹಳ್ಳಿಗಳ ಮಕ್ಕಳಿಗೆ ಇದೊಂದೇ ಶಾಲೆ ಆಸರೆಯಾಗಿದೆ. ಇಲ್ಲಿ ಪದವಿಪೂರ್ವ ಶಿಕ್ಷಣ ಇಲ್ಲದೆ ವಿದ್ಯಾರ್ಥಿಗಳು ದೂರದ ವೇಮಗಲ್ ಅಥವಾ ಕೋಲಾರ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗಿದೆ.

ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣ ವಿಶಾಲವಾಗಿದೆ. ಕೊಠಡಿಗಳು ಲಭ್ಯವಿದೆ. ಕಾಲೇಜು ಪ್ರಾರಂಭಿಸಲು ಸೂಕ್ತವಾದ ಪರಿಸರ ಇದೆ. ಪದವಿ ಪೂರ್ವ ಕಾಲೇಜು ಪ್ರಾರಂಭಿಸಿ ಈ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳೀಯವಾಗಿ ಸರ್ಕಾರಿ ಪಿಯು ಕಾಲೇಜು ಇಲ್ಲದೆ ಕೆಲ ಮಕ್ಕಳು ದೂರದ ಊರುಗಳಿಗೆ, ಖಾಸಗಿ ಕಾಲೇಜುಗಳಿಗೆ ಹೋಗಲು ಹಣವಿಲ್ಲದೆ ತಮ್ಮ ವಿದ್ಯಾಭ್ಯಾಸ ಕೊನೆಗೊಳಿಸುವಂತಾಗಿದೆ ಎಂದು ಸ್ಥಳೀಯರಾದ ಆನಂದ್ಗೌಡ ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆ ತಾರತಮ್ಯದಿಂದ ನೋಡುತ್ತಿದೆ. ಈ ಕೂಡಲೇ ಇದನ್ನು ಸರಿಪಡಿಸಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪಿಯು ಪ್ರಾರಂಭಿಸಬೇಕು ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮ ಶಿವಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.