ಮಾಲೂರು: ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಪಾಳ್ಯ ಗ್ರಾಮಕ್ಕೆ ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಆಲಂಬಾಡಿ ಬಂಡಿದಾರಿಯನ್ನು ಪಕ್ಕದ ಭೂ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಇದನ್ನು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಡಿಪಾಳ್ಯ ಗ್ರಾಮದಲ್ಲಿ ಸುಮಾರು 20 ಕುಟುಂಬಗಳು ಅನೇಕ ವರ್ಷಗಳಿಂದ ಇಲ್ಲಿಯೇ ವಾಸಿ ಇವೆ. ಈ ಗ್ರಾಮದಿಂದ ಆಲಂಬಾಡಿ ಗ್ರಾಮಕ್ಕೆ ಬಂಡಿದಾರಿ ಇತ್ತು. ಈಗ ಆ ದಾರಿಯನ್ನು ಪಕ್ಕದ ಭೂ ಮಾಲೀಕರು ಮುಚ್ಚಿ ಹಾಕಿ, ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ದಾರಿ ಬಿಟ್ಟುಕೊಡಿ ಎಂದು ಕೇಳಿದರೆ ದಾಖಲೆಗಳನ್ನು ಕೇಳುತ್ತಾರೆ. ಸಂಬಂಧಪಟ್ಟ ತಾಲ್ಲೂಕು ಆಡಳಿತ ಹಾಗೂ ಇಲಾಖೆ ಅಧಿಕಾರಿಗಳುಈ ಕಂಪೌಂಡನ್ನು ತೆರವುಗೊಳಿಸಿ ಡಿಪಾಳ್ಯ ಗ್ರಾಮಸ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಎ.ಕೆ. ವೆಂಕಟೇಶ್, ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಪಾಳ್ಯ ಗ್ರಾಮವು ಒಂದು ಕುಗ್ರಾಮವಾಗಿದ್ದು, ಒಂದೇ ಸಮುದಾಯ ಸುಮಾರು 20 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಆಲಂಬಾಡಿ ರಸ್ತೆಯನ್ನು ಪಕ್ಕದ ಜಮೀನಿನವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ, ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಪ್ರತಿಯೊಂದು ಕೆಲಸ–ಕಾರ್ಯಗಳಿಗೂ ಆಲಂಬಾಡಿ ಗ್ರಾಮವನ್ನು ಅವಲಂಬಿಸಿರುವ ಇಲ್ಲಿನ ಜನ ಸಂಪರ್ಕವನ್ನೇ ಕಡಿದುಕೊಂಡು ಕಂಗಾಲಾಗಿದ್ದಾರೆ. ದಾರಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೇ ಗ್ರಾಮಸ್ಥರೊಂದಿಗೆ ಸೇರಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಮಿತಿಯ ತಾಲ್ಲೂಕು ಪ್ರಧಾನ ಸಂಚಾಲಕ ಕಲ್ಕೆರೆ ಮುನಿರಾಜು, ಅಂಚೆಮೂಸ್ಕೂರು ಶಂಕರಪ್ಪ, ಡಿಪಾಳ್ಯ ಗ್ರಾಮದ ಜಯಮ್ಮ, ಮಂಗಮ್ಮ, ಲಕ್ಷ್ಮಮ್ಮ, ಗಾಯಿತ್ರಿ ಮುನಿಯಮ್ಮ, ನಂಜಪ್ಪ, ನಾಗೇಶ್, ಕಿರಣ್ ಕುಮಾರ್, ಮುನಿಸ್ವಾಮಿ, ಮುನಿರಾಜು ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.