ಬೇತಮಂಗಲ: ಶ್ರಾವಣ ಮಾಸದ ನಾಲ್ಕನೇ ಶನಿವಾರದಂದು ಚಿಕ್ಕತಿರುಪತಿಯ ವೆಂಕಟರಮಣ ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.

ಮುಂಜಾನೆ 4ರಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿಶೇಷ ದರ್ಶನಕ್ಕೆ ₹100 ನಿಗದಿಪಡಿಸಲಾಗಿತ್ತು. ಸ್ವಾಮಿಯ ದರ್ಶನ ಜಿಲ್ಲೆಯವರು ಸೇರಿದಂತೆ ಹೊರ ರಾಜ್ಯದವರು ಆಗಮಿಸಿದ್ದರು.

ದೇವಾಲಯವನ್ನು ವಿದ್ಯುತ್ ದೀಪ ಹಾಗೂ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ಯಾವುದೇ ಅಹಿತರಕರ ಘಟನೆ ಸಂಭವಿಸದಂತೆ ಬೇತಮಂಗಲ ಪೊಲೀಸರು ಎಚ್ಚರಿಕಾ ಕ್ರಮಗಳನ್ನು ಅನುಸರಿಸಿದ್ದರು.

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಪ್ರಭಾಕರ್, ಕೋಲಾರ ಜಿಲ್ಲಾಧಿಕಾರಿ ರವಿ, ಶಾಸಕರಾದ ರೂಪಕಲಾ ಶಶಿಧರ್, ಕೆ.ವೈ.ನಂಜೇಗೌಡ, ಎಸ್.ಎನ್.ಸುಬ್ಬಾರೆಡ್ಡಿ, ವೈ.ಸಂಪಂಗಿ, ವಿ.ಮೋಹನ್ ಕೃಷ್ಣ, ಅಶೋಕ್ ಕೃಷ್ಣಪ್ಪ, ಶ್ರೀನಿವಾಸ್ ರೆಡ್ಡಿ, ಪೇಷ್ಕರ್ ಸುರೇಶ್ ಬಾಬು, ಪಾಪೇಗೌಡ, ನರಸಿಂಹ ಗೌಡ, ರೇಣುಕಾ ಜಯರಾಮ್ ರೆಡ್ಡಿ, ವಿಜಯಲಕ್ಷ್ಮಿ, ನವೀನ್ ರಾಮ್, ಚಿನ್ನಪ್ಪ, ಸೊಣ್ಣಮ್ಮ ರಮೇಶ್ ಸೇರಿದಂತೆ ಇತರರು ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.