ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

18 ಶಿಕ್ಷಕರು ಆಯ್ಕೆ: ಇಂದು ಪ್ರಶಸ್ತಿ ಪ್ರದಾನ ಸಮಾರಂಭ
Last Updated 4 ಸೆಪ್ಟೆಂಬರ್ 2020, 15:33 IST
ಅಕ್ಷರ ಗಾತ್ರ

ಕೋಲಾರ: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯ ವಿವಿಧ ತಾಲ್ಲೂಕುಗಳ 6 ಮಂದಿ ಪ್ರೌಢ ಶಾಲಾ ಶಿಕ್ಷಕರು, 6 ಮಂದಿ ಹಿರಿಯ ಪ್ರಾಥಮಿಕ ಮತ್ತು 6 ಮಂದಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜಿಲ್ಲಾ ಕೇಂದ್ರದ ಸ್ಕೌಟ್ಸ್‌ ಭವನದಲ್ಲಿ ಶನಿವಾರ (ಸೆ.5) ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಗುತ್ತದೆ.

ಪ್ರೌಢ ಶಾಲಾ ವಿಭಾಗದಲ್ಲಿ ಕೆಜಿಎಫ್ ತಾಲ್ಲೂಕಿನ ಊರಿಗಾಂಪೇಟೆ ಶಾಲೆಯ ಸಹ ಶಿಕ್ಷಕಿ ವೀಣಾ ಹೆಗಡೆ, ಬಂಗಾರಪೇಟೆ ತಾಲ್ಲೂಕಿನ ಎಸ್‌.ಮಾದಮಂಗಲ ಶಾಲೆಯ ಸಹ ಶಿಕ್ಷಕಿ ಎಂ.ಸಿ.ಶಾರದಾಂಬ, ಕೋಲಾರ ತಾಲ್ಲೂಕಿನ ಶಾಪೂರು ಶಾಲೆಯ ಸಹ ಶಿಕ್ಷಕಿ ಸಿ.ಪದ್ಮಾವತಿ, ಮುಳಬಾಗಿಲು ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಎಂ.ಜಯಣ್ಣ, ಮಾಲೂರು ತಾಲ್ಲೂಕಿನ ಡಿ.ಎನ್‌.ದೊಡ್ಡಿ ಶಾಲೆಯ ಸಹ ಶಿಕ್ಷಕಿ ಕಲ್ಪವಲ್ಲಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕಿ ವಿ.ರಾಮಲಕ್ಷ್ಮಮ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೆಜಿಎಫ್‌ ತಾಲ್ಲೂಕಿನ ತಾವರೆಕರೆ ಶಾಲೆಯ ಸಹ ಶಿಕ್ಷಕ ವೈ.ಶಂಕರರೆಡ್ಡಿ, ಬಂಗಾರಪೇಟೆ ತಾಲ್ಲೂಕಿನ ತೊಂಗಲ್‌ ಕೊಪ್ಪ ಗ್ರಾಮದ ಶಾಲೆಯ ಸಹ ಶಿಕ್ಷಕ ಟಿ.ಎನ್‌.ಹನುಮಂತಾಚಾರ್‌, ಕೋಲಾರ ತಾಲ್ಲೂಕಿನ ಆಲಿಕುಂಟೆ ಶಾಲೆಯ ಸಹ ಶಿಕ್ಷಕ ಜೆ.ಎನ್‌.ಕೃಷ್ಣಯ್ಯಶೆಟ್ಟಿ, ಮುಳಬಾಗಿಲು ತಾಲ್ಲೂಕಿನ ಜಮ್ಮನಹಳ್ಳಿ ಶಾಲೆಯ ಸಹ ಶಿಕ್ಷಕಿ ಎಸ್‌.ಸತ್ಯವತಿ, ಮಾಲೂರು ತಾಲ್ಲೂಕಿನ ದೊಮ್ಮಲೂರು ಶಾಲೆಯ ಸಹ ಶಿಕ್ಷಕ ಎಸ್.ನಾರಾಯಣಸ್ವಾಮಿ, ಶ್ರೀನಿವಾಸಪುರ ತಾಲ್ಲೂಕಿನ ಹೆಬ್ಬಟ ಗ್ರಾಮದ ಶಾಲೆಯ ಸಹ ಶಿಕ್ಷಕ ಎನ್‌.ರವಣಪ್ಪ ಅವರಿಗೆ ಪ್ರಶಸ್ತಿ ಲಭಿಸಿದೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೆಜಿಎಫ್‌ ತಾಲ್ಲೂಕಿನ ಘಟ್ಟಮಾದಮಂಗಲ ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ, ಬಂಗಾರಪೇಟೆ ತಾಲ್ಲೂಕಿನ ಯಳೇಸಂದ್ರ ಶಾಲೆಯ ಸಹ ಶಿಕ್ಷಕ ಎಸ್‌.ಸುಬ್ಬರಾವ್‌, ಕೋಲಾರ ತಾಲ್ಲೂಕಿನ ವಿಟ್ಟಪ್ಪನಹಳ್ಳಿ ಶಾಲೆಯ ಸಹ ಶಿಕ್ಷಕ ಎಸ್.ರಾಜೇಶ್‌, ಮುಳಬಾಗಿಲು ತಾಲ್ಲೂಕಿನ ಎಚ್‌.ಗೊಲ್ಲಹಳ್ಳಿ ಶಾಲೆಯ ಸಹ ಶಿಕ್ಷಕಿ ಎನ್‌.ಪಿ.ಮಂಜುಳಾ, ಮಾಲೂರು ತಾಲ್ಲೂಕಿನ ಅಗ್ರಹಾರ ಶಾಲೆಯ ಸಹ ಶಿಕ್ಷಕಿ ಎ.ನ್‌.ಗಾಯತ್ರಿದೇವಿ, ಶ್ರೀನಿವಾಸಪುರ ತಾಲ್ಲೂಕಿನ ದಿಂಬಾಲ ಶಾಲೆಯ ಸಹ ಶಿಕ್ಷಕಿ ಶೋಭಾವತಮ್ಮ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT