ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವ

Published 8 ಆಗಸ್ಟ್ 2024, 23:20 IST
Last Updated 8 ಆಗಸ್ಟ್ 2024, 23:20 IST
ಅಕ್ಷರ ಗಾತ್ರ

ಕೆಜಿಎಫ್‌: ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆ 11.30ರ ಸಮಯದಲ್ಲಿ ಲಘು ಭೂಕಂಪನದ ಅನುಭವವಾಗಿದೆ. 

ನಗರದ ಮೈನಿಂಗ್ ಪ್ರದೇಶದಲ್ಲಿರುವ ಮೈಸೂರು ಮೈನ್ಸ್ ಪ್ರದೇಶದ ಸುರಂಗದೊಳಗೆ ಭೂಕಂಪನ ಉಂಟಾಗಿರುವ ಸಂಭವ ಇದೆ. ಭೂಮಟ್ಟದಿಂದ ಸ್ವಲ್ಪ ಕೆಳಭಾಗದಲ್ಲಿ ಕಂಪನ ಆಗಿರುವುದರಿಂದ ನಡುಗುವಿಕೆ ಕಡಿಮೆಯಾಗಿ ಕಂಪನದ ಶಬ್ದ ಜೋರಾಗಿ ಕೇಳಿಸಿದೆ ಎಂದು ಎನ್‌ಐಆರ್‌ಎಂ ವಿಜ್ಞಾನಿ ರಾಜನ್‌ ಬಾಬು ಅಂದಾಜಿಸಿದ್ದಾರೆ. 

ಬಿಜಿಎಂಎಲ್‌ ( ಚಿನ್ನದ ಗಣಿ) ಕಾರ್ಯನಿರ್ವಹಿಸುತ್ತಿದ್ದಾಗ ಸುರಂಗದೊಳಗೆ ಬಂಡೆಗಳ ಅಲುಗಾಟದಿಂದ ಆಗಾಗ್ಗೆ ಭೂ ಕಂಪನ ಉಂಟಾಗುತ್ತಿತ್ತು. ಮಳೆಗಾಲದಲ್ಲಿ ಬಂಡೆಗಳು ಕುಸಿದು ಬೀಳುತ್ತಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕಂಪಿಸುತ್ತಿತ್ತು. ಚಿನ್ನದ ಗಣಿ ಮುಚ್ಚಿದ ಮೇಲೆ ಸುರಂಗದಲ್ಲಿ ನೀರು ತುಂಬಿದೆ. ಗಣಿಗಾರಿಕೆ ನಡೆಯುತ್ತಿಲ್ಲ. ಇದರಿಂದಾಗಿ ಕಂಪನದ ಪ್ರಮಾಣ ಕಡಿಮೆಯಾಗಿದೆ ಎಂದು ಪರಿಣಿತರು ಹೇಳುತ್ತಾರೆ.

ಕೆಜಿಎಫ್‌, ಬಂಗಾರಪೇಟೆ ಮತ್ತು ಬೇತಮಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಪನದ ಅನುಭವವಾಗಿದೆ. ಯಾವುದೇ ಹಾನಿಯಾಗಿಲ್ಲ. ನಗರದಲ್ಲಿರುವ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆಯಲ್ಲಿ (ಎನ್‌ಐಆರ್ ಎಂ)  ಭೂ ಕಂಪನ ಅಳೆಯುವ ಸಿಸ್ಮೋಗ್ರಾಫ್‌ ಸಾಧನ ಅಳವಡಿಸಲಾಗಿತ್ತು. ಈಚೆಗೆ ಅದನ್ನು ಉಪಯೋಗಿಸದ ಕಾರಣ ಕಂಪನದ ಪ್ರಮಾಣ ತಿಳಿಯಲು ಸಾಧ್ಯವಾಗಿಲ್ಲ ಎಂದು ಎನ್‌ಐಆರ್‌ಎಂ ಸಿಬ್ಬಂದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT